Tumkur Weather Report | ತುಮಕೂರು ಜಿಲ್ಲೆಯಲ್ಲಿ ಇನ್ನೂ ಮುಂದುವರೆಯುತ್ತೆ ಮೋಡ ಕವಿದ ವಾತಾವರಣ : ರೈತರು ತಮ್ಮ ಬೆಳೆ ರಕ್ಷಣೆಗೆ ತಪ್ಪದೆ ಇದನ್ನು ಮಾಡಿ..?

0
54

ಕೃಷಿ ಮಾಹಿತಿ : ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮೋಡಕವಿದ ವಾತಾವರಣವಿದ್ದು, ಇದು ಇನ್ನೂ ಕೂಡ ಮುಂದುವರೆಯುತ್ತದೆ ಎಂದು ಹವಾಮಾನ ಇಲಾಖೆಯ ತಜ್ಞರು ಮಾಹಿತಿಯನ್ನು ನೀಡಿದ್ದಾರೆ.

ಇನ್ನು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ತುಮಕೂರು ಜಿಲ್ಲೆಯಾದ್ಯಂತ ನವಂಬರ್ 23 ರಿಂದ 27ರವರೆಗೆ ಮೋಡ ಕವಿದ ವಾತಾವರಣ ಮತ್ತು ಹಗುರ ಮಳೆಯಾಗುವ ಸಂಭವವಿದ್ದು ರೈತರು ಕೃಷಿ ಬೆಳೆಗಳಿಗೆ ಮತ್ತು ಜಾನುವಾರಗಳಿಗೆ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಲಾಗಿದೆ.

ಕೃಷಿ ಹವಾಮಾನ ಘಟಕದ ವಿಜ್ಞಾನಿಗಳಿಂದ ರೈತರಿಗೆ ಸಲಹೆ

  • ಇಂತಹ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಸ್ಯ ಸಂರಕ್ಷಣೆ ಸಿಂಪಡಣೆ, ಬೆಳೆಗಳ ಕಟಾವು ಮತ್ತು ಒಕ್ಕಣೆ ಮಾಡುವುದನ್ನು ಮುಂದೂಡಬೇಕು.
  • ತೊಗರಿ ಬೆಳೆಯಲ್ಲಿ ಕಾಯಿ ಕೊರಕ ನಿರ್ವಹಣೆಗಾಗಿ ಎಕರೆಗೆ 8 ಮೋಹಕ ಬಲೆ ಅಳವಡಿಸಬೇಕು. ಪ್ರತಿ ಲೀಟರ್ ನೀರಿಗೆ ಎರಡು ಮಿಲಿ ಲೀಟರ್ ಪ್ರೊಪೆನೋಫಸ್ ಕೀಟನಾಶಕ ಬೆರೆಸಿ ಸಿಂಪಡಿಸುವುದರಿಂದ ತೊಗರಿ ಕಾಯಿ ಕೊರಕ ಹಾಗೂ ಗೂಡು ಮಾಡುವ ಹುಳು ನಿರ್ವಹಿಸಬಹುದು.
  • ಇನ್ನು ಚಳಿಗಾಲದಲ್ಲಿ ಹಾಲಿನ ಗುಣಮಟ್ಟ ಕಾಪಾಡಲು ಹೈನುರಾಸುಗಳಿಗೆ ಸಮತೋಲನ ಆಹಾರ ಪೂರೈಕೆ ಅತ್ಯವಶ್ಯಕ. ಕಟಾವಾದ ಜೋಳವನ್ನು ಉಪಯೋಗಿಸಿಕೊಂಡು ರಸಮೇವನ್ನು ತಯಾರಿಸಿ ರಾಸುಗಳಿಗೆ ಪೌಷ್ಟಿಕವಾದಂತಹ ಮೇವನ್ನು ಒದಗಿಸಬೇಕು.
  • ಹಿತ್ತಲಲ್ಲಿ ಸಾಗುವ ಕೋಳಿಗಳಿಗೆ ಕೊಕ್ಕರೆ ರೋಗದ ಲಸಿಕೆ ಹಾಕಿಸಬೇಕು.
  • ಕೋಳಿಗಳಿಗೆ ಚಳಿಗಾಲದ ಒತ್ತಡ ತಪ್ಪಿಸಲು ಕೋಳಿ ಫಾರಂ ಗಳಲ್ಲಿ ಕೃತಕ ಹೀಟರ್ ಗಳನ್ನು ಹಾಕುವ ಮೂಲಕ ಬೆಚ್ಚನೆಯ ವಾತಾವರಣ ಸೃಷ್ಟಿಸುವುದು ಅತ್ಯವಶ್ಯಕ ಮತ್ತು ರೇಷ್ಮೆ ಹುಳು ಘಟಕಗಳ ಕೋಣೆಯಲ್ಲಿ ಉಷ್ಣಾಂಶವನ್ನು ಕಾಪಾಡಿಕೊಳ್ಳಬೇಕು.

ಎಂದು ತುಮಕೂರು ಜಿಲ್ಲೆಯ ರೈತರಿಗೆ ತಿಪಟೂರು ತಾಲೂಕಿನ ಬಿದರೆ ಗುಡಿ ಕಾವಲಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕದ ವಿಜ್ಞಾನಿಗಳು ಮಾಹಿತಿಯನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here