Tumkur Metropolitan Corporation | ವರದಿಗೆ ಎಚ್ಚೆತ್ತ ತುಮಕೂರು ಮಹಾನಗರ ಪಾಲಿಕೆ : ಶ್ರದ್ಧಾಂಜಲಿ ವಾಹನದ ಮೇಲೆ ಬಿತ್ತು ಸಂಪರ್ಕ ಸಂಖ್ಯೆ..!

0
26

ತುಮಕೂರು | ತುಮಕೂರು ಮಹಾನಗರ ಪಾಲಿಕೆಯ ಶ್ರದ್ಧಾಂಜಲಿ ವಾಹನದ ದುಸ್ಥಿತಿಯ ಬಗ್ಗೆ ಇತ್ತೀಚಿಗೆ ವರದಿಯನ್ನು ಮಾಡಲಾಗಿತ್ತು. ಇದರಿಂದ ಎಚ್ಚೆತ್ತ ತುಮಕೂರು ಮಹಾನಗರ ಪಾಲಿಕೆ ಕ್ರಮವನ್ನ ಕೈಗೊಂಡಿದೆ.

ಹೌದು,, ತುಮಕೂರಿನ 35 ವಾರ್ಡ್ ಗಳಿಗೆ ಒಂದೇ ಒಂದು ಶ್ರದ್ಧಾಂಜಲಿ ವಾಹನವಿದ್ದು, ಇರೋ ವಾಹನದ ಮೇಲೆ ಫೋನ್ ನಂಬರ್ ಕೂಡ ಇರಲಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿತ್ತು.

ಸುದ್ದಿ ನೋಡಿ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ ಮೇಯರ್ ಪ್ರಭಾವತಿ ಮತ್ತೊಂದು ಶ್ರದ್ಧಾಂಜಲಿ ವಾಹನದ ಭರವಸೆ ಹಾಗೂ ಫೋನ್ ನಂಬರ್ ಪ್ರಕಟ ಮಾಡಿದ್ದು, ಇದೀಗ ಶ್ರದ್ಧಾಂಜಲಿ ವಾಹನದ ಮೇಲೆ ಫೋನ್ ನಂಬರ್ ಕಾಣಿಸಿಕೊಂಡಿದ್ದು ಅಗತ್ಯ ಇರುವವರು ಸಂಪರ್ಕ ಮಾಡಿಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here