Tiptur Without Electricity | ಬೆಳಕು ಕಾಣದ ತಿಪಟೂರು ನಗರ : ಸಚಿವರ ಕ್ಷೇತ್ರದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ..!

0
23

ತಿಪಟೂರು | ಅಧಿಕಾರಿಗಳು ಮತ್ತು ಜನನಾಯಕರ ನಿರ್ಲಕ್ಷದಿಂದ ಮೂಲಸೌಕರ್ಯಗಳಿಲ್ಲದೇ ಸಚಿವರ ತವರು ಕ್ಷೇತ್ರ ಸೊರಗುತ್ತಿದೆ. ತುಮಕೂರು ಜಿಲ್ಲೆಯ ತಿಪಟೂರು ನಗರವನ್ನ ಕೇಳೋರೇ ಗತಿ ಇಲ್ಲ ಎಂದು ಸಾರ್ವಜನಿಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಹೌದು,, ತಿಪಟೂರು ನಗರದ ಹೃದಯ ಭಾಗ ಕತ್ತಲಿನಲ್ಲಿ ಮುಳುಗಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹಳೆಪಾಳ್ಯದವರೆಗೆ ಕತ್ತಲು ಆವರಿಸಿದ್ದು, ಆರ್‌ಟಿಓ ಕಚೇರಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಂಕೀರ್ಣ, ಹಳೆಪಾಳ್ಯ, ದೊಡ್ಡಯ್ಯನಪಾಳ್ಯ, ಕುಮಾರಸ್ವಾಮಿ ಲೇಔಟ್, ಗುಬ್ಬಿ ಲೇಔಟ್, ಅಫೀಷಿಯಲ್ ಲೇಔಟ್, ಗಾಯತ್ರಿನಗರ ಇದರಿಂದ ಹೊರತಾಗಿಲ್ಲ.

ಜೀವ ಕೈಯಲ್ಲಿ ಹಿಡಿದುಕೊಂಡು ಕತ್ತಲಲ್ಲಿ  ಸಾರ್ವಜನಿಕರು ಮನೆ ತಲುಪಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಉದ್ಯೋಗಿ ಮಹಿಳೆಯರು, ಟ್ಯೂಷನ್‌ಗೆ ಹೋದ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಮನೆಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಸಮಸ್ಯೆ ಹೇಳಿದ್ರು ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ತಮ್ಮ ಸಂಕಷ್ಟ ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here