ಸಂಭೋಗದ ವೇಳೆ ಮಹಿಳೆಯರಲ್ಲಿ ನೋವು ಕಾಣಿಸಿಕೊಳ್ಳಲು ಇದೆ ಪ್ರಮುಖ ಕಾರಣ..!

0
11

ಆರೋಗ್ಯ ಸಲಹೆ | ಸಾಮಾನ್ಯವಾಗಿ ಗಂಡ ಹೆಂಡತಿ  ಮೊದಲ ಸಂಭೋಗದ ವೇಳೆ ಯೋನಿನಾಳದ ಪೊರೆಯು ಯೋನಿಯೊಳಗೆ ಸೇರುತ್ತಿದ್ದಂತೆ ನೋವು ಕಾಣಿಸಿಕೊಳ್ಳಲಾರಂಭಿಸುತ್ತದೆ. ಸಂಭೋಗದ ವೇಳೆ ಪೊರೆಯು ಹಿಗ್ಗುವುದರಿಂದ ಅಥವಾ ಹರಿಯುವುದರಿಂದ ನೋವು ಕೆಲವು ದಿನಗಳವರೆಗೆ ಇರುತ್ತದೆ. ಕೆಲವೊಮ್ಮೆ ದಂಪತಿಗೆ ಸಂಭೋಗ ಪ್ರಕ್ರಿಯೆ ನಡೆಸುವುದು ಹೇಗೆ ಎಂಬ ಜ್ಞಾನ ಇರುವುದಿಲ್ಲ ಮತ್ತು ಯಾವುದೇ ಸರಿಯಾದ ಕ್ರಮವನ್ನು ಅನುಸರಿಸದೇ ಸಂಭೋಗ ಕ್ರಿಯೆಯಲ್ಲಿ ತೊಡಗಬಹುದು. ಇದು ನೋವಿಗೆ ಕಾರಣವಾಗುತ್ತದೆ. ಮಹಿಳೆಯು ಸಂಭೋಗ ಕ್ರಿಯೆ ವೇಳೆ ಸಮರ್ಪಕವಾಗಿ ಉದ್ರೇಕಗೊಂಡಿರಬೇಕು ಮತ್ತು ಯೋನಿಯಲ್ಲಿ ಸ್ರವಿಸುವಿಕೆ ಆಗಬೇಕು. ಈ ಕ್ರಮ ಇದ್ದರೆ ಸಂಭೋಗ ಕ್ರಿಯೆಯು ಯಾವುದೇ ನೋವು ಅಥವಾ ಕಷ್ಟವಿಲ್ಲದೇ ನಡೆಯುತ್ತದೆ.

ಮಹಿಳೆಯರಲ್ಲಿ ಸಂಭೋಗದ ಬಗ್ಗೆ ಮಾಹಿತಿಯ ಕೊರತೆ

ವೆಬ್‌ಸೈಟ್‌ಗಳು, ಪುಸ್ತಕಗಳು ಮತ್ತು ಮಾಧ್ಯಮಗಳಲ್ಲಿ ಸರಿಯಾದ ಸಂಭೋಗ ಕ್ರಮಗಳ ಬಗ್ಗೆ ಮಾಹಿತಿಗಳು ಇದ್ದರೂ ಶೇ 20–30 ರಷ್ಟು ದಂಪತಿಗಳು ಅದನ್ನು ನಿರ್ಲಕ್ಷ್ಯ ಮಾಡುತ್ತಾರೆ. ನಮ್ಮ ದೇಶದಲ್ಲಿ ಲೈಂಗಿಕತೆ ಎಂಬುದನ್ನು ನಿಷಿದ್ಧ ಎಂದು ಭಾವಿಸಿದ್ದಾರೆ. ಹಲವಾರು ಮಹಿಳೆಯರು ಮತ್ತು ಪುರುಷರು ಲೈಂಗಿಕತೆ ಬಗ್ಗೆ ಮಾತನಾಡುವುದು ಮತ್ತು ಲೈಂಗಿಕತೆ ಬಗ್ಗೆ ಸೂಕ್ತವಾದ ಜ್ಞಾನ ಹೊಂದಬೇಕೆಂದು ಮಾತನಾಡುವುದು ಅಸಹ್ಯಕರ ಎಂದು ಭಾವಿಸಿದ್ದಾರೆ. ಇದು ಲೈಂಗಿಕ ಜೀವನದಲ್ಲಿ ಸಾಕಷ್ಟು ಗೊಂದಲಗಳು ಮತ್ತು ಹತಾಶೆಗೆ ಕಾರಣವಾಗುತ್ತದೆ.

ಇನ್ನೂ ಸಂಪ್ರದಾಯಸ್ಥ ವಾತಾವರಣದಿಂದ ಬೆಳೆದು ಬಂದಿರುವ ಮಹಿಳೆ ಪತಿಯೊಂದಿಗೆ ಸಂಭೋಗ ಕ್ರಿಯೆ ನಡೆಸುವಾಗ ಭಯ ಮತ್ತು ಆತಂಕಕ್ಕೆ ಒಳಗಾಗುತ್ತಾಳೆ. ಇದು ಯೋನಿ ತುಡಿತ ಅಥವಾ ನೋವಿನಂತಹ ಅಂಶಗಳಿಗೆ ಕಾರಣವಾಗುತ್ತದೆ. ಭಯವಾದಾಗ ಸ್ನಾಯು ಸಡಿಲವಾಗದೇ ಇರುವುದರಿಂದ ನೋವಾಗುತ್ತದೆ.

ಫಂಗಸ್ಸೋಂಕು ಕೂಡ ನೋವಿಗೆ ಕಾರಣ

ಯೋನಿಯಲ್ಲಿನ ಫಂಗಸ್‌ ಸೋಂಕು ಸಹ ಸಂಭೋಗ ಕ್ರಿಯೆ ವೇಳೆ ನೋವಿಗೆ ಕಾರಣವಾಗುತ್ತದೆ. ಮೂತ್ರನಾಳದಲ್ಲಿ ಸೋಂಕು (ಯುಟಿಐ) ಇದ್ದರೂ ಸಹ ನೋವಿಗೆ ಕಾರಣವಾಗುತ್ತದೆ. ಯೋನಿ ಮತ್ತು ಯುಟಿಐ ಸೋಂಕು ಇದ್ದರೆ ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ. ಸಂಭೋಗ ಕ್ರಿಯೆ ವೇಳೆ ಮಹಿಳೆಯರಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುವುದು ಅತ್ಯಂತ ವಿರಳ. ಇದಕ್ಕೆ ಪ್ರಮುಖ ಕಾರಣವೆಂದರೆ ದೀರ್ಘಕಾಲದ ಸೋಂಕು. ಜನನಾಂಗದಲ್ಲಿನ ಕ್ಷಯ ಮತ್ತು ಆಳವಾಗಿ ಎಂಡೋಮೆಟ್ರಿಯೋಸಿಸ್‌ನ ಒಳನುಸುಳುವಿಕೆಯಂತಹ ಅಂಶಗಳು ಕಾರಣವಾಗುತ್ತವೆ.

ಹೀಗಾಗಿ ಮಹಿಳೆಯರಲ್ಲಿ ಸಂಭೋಗದ ವೇಳೆ ತೀವ್ರತರನಾದ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದನ್ನು ಮುಚ್ಚಿಡದೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಅದು ಗಂಭೀರ ಸ್ವರೂಪದ ಸಮಸ್ಯೆಯಾಗಿ ಬೆಳೆಯಬಹುದು, ತಜ್ಞ ವೈದ್ಯರನ್ನು ಸಂಪರ್ಕ ಮಾಡಿ ಸಲಹೆ ಪಡೆಯುವುದು ಉತ್ತಮ.

LEAVE A REPLY

Please enter your comment!
Please enter your name here