Sira Politics | ಶಿರಾ ರಾಜಕೀಯ : ಹೆಲ್ಮೆಟ್ ಪಡೆಯಲು ನೂಕು ನುಗ್ಗಲು : ಪೊಲೀಸರ ಹರಸಾಹಸ..!

0
21

ತುಮಕೂರು ಗ್ರಾಮಾಂತರ | ಮಾರ್ಚ್.. ಏಪ್ರಿಲ್ ವೇಳೆಗೆ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ರಾಜಕೀಯ ಪಕ್ಷಗಳು ಭರದ ಸಿದ್ದತೆಯಲ್ಲಿವೆ. ಇದರ ಭಾಗವಾಗಿ ಆಕಾಂಕ್ಷಿತರು, ಅಭ್ಯರ್ಥಿಗಳು ಮತದಾರರಿಗೆ ವಿವಿಧ ರೀತಿಯ ಉಚಿತ ಕೊಡುಗೆಗಳನ್ನೂ ಕೊಡುತಿದ್ದಾರೆ. ತುಮಕೂರಿನ ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಉಗ್ರೇಶ್ ಉಚಿತವಾಗಿ ಹೆಲ್ಮೆಟ್ ಹಂಚಿ ಸುದ್ದಿಯಲ್ಲಿದ್ದಾರೆ. 

ಹೌದು,, ಸುಮಾರು ೫ ಸಾವಿರಕ್ಕೂ ಹೆಚ್ಚು ಹೆಲ್ಮೆಟ್ ತಂದು ಶಿರಾ ನಗರದ ಐಬಿ ಸರ್ಕಲ್ನಲ್ಲಿ ವಿತರಣೆ ಮಾಡಿದ್ದಾರೆ. ಉಚಿತ ಹೆಲ್ಮೆಟ್ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ರು. ಹೆಲ್ಮೆಟ್ ಗಾಗಿ ತಾ ಮುಂದು ನಾ ಮುಂದು ಎಂದು ಪರಸ್ಪರ ನೂಕಾಟ ತಳ್ಳಾಟ ಮಾಡಿಕೊಂಡಿದ್ದಾರೆ.  ಇದರ ಪರಿಣಾಮ ಸುಮಾರು ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಕೂಡ ಆಗಿತ್ತು.

ಕಳೆದ ಬಾರಿ ಶಿರಾ ಕ್ಷೇತ್ರದಲ್ಲಿ ಗೆದ್ದು ಬೀಗಿದ ಜೆಡಿಎಸ್ ಶಾಸಕ ಸತ್ಯ ನಾಯಾರಣ್ ಅಕಾಲಿಕ ಮರಣ ಹೊಂದಿದ್ರು. ಪರಿಣಾಮ 2020 ರ ನವೆಂಬರ್ ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಡಾ.ರಾಜೇಶ್ ಗೌಡ ಗೆಲುವು ಸಾಧಿಸಿದ್ರು. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿ ಗೆದ್ದು ಇತಿಹಾಸ ಸೃಷ್ಟಿಸಿದೆ. ಅಲ್ಲಿಂದ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ರಾಜೇಶ್ ಗೌಡರ ಪ್ರಭಾವ ಜೋರಾಗಿದೆ. ಉಪ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟ ಜೆಡಿಎಸ್‌ಗೆ ಈಗ ಸೂಕ್ತ ಅಭ್ಯರ್ಥಿಯೆ ಇಲ್ಲದಂತಾಗಿದೆ.

ತಾಲೂಕಿನಲ್ಲಿ ಪಕ್ಷ ಮುನ್ನಡೆಸುವ ಸಾಮರ್ಥ್ಯದ ನಾಯಕ ಕೊರತೆ ಇರೋದ್ರಿಂದ ಕಾರ್ಯಕರ್ತರೂ ವಿಚಲಿತರಾಗಿದ್ದಾರೆ. ಹೇಗಾದರೂ ಪಕ್ಷವನ್ನು ಮತ್ತೇ ಬಲಪಡಿಸಬೇಕು ಎಂಬ ಕಾರಣದಿಂದ ಟಿಕೆಟ್ ಆಕಾಂಕ್ಷಿ ಉಗ್ರೇಶ್ ಉಚಿತವಾಗಿ ಹೆಲ್ಮೆಟ್ ಹಂಚಿದ್ದಾರೆ. ತಮ್ಮ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಲ್ಲ ಅನ್ನೋದನ್ನು ಸ್ವತಃ ಮಾಜಿ ಶಾಸಕ ಸತ್ಯನಾರಾಯಣರ ಪುತ್ರ ಸತ್ಯ ಪ್ರಕಾಶ್ ವೇದಿಕೆಯಲ್ಲಿ ಹೇಳಿರೋದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಮತದಾರರನ್ನು ಸೆಳೆಯಲು ಉಚಿತ ಹೆಲ್ಮೆಟ್ ಹಂಚಿದ್ದನ್ನು ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಖಂಡಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜೆಡಿಎಸ್ ನಾಯಕರು ಕ್ಷೇತ್ರದ ಜನರ ಸಹಾಯಕ್ಕೆ ಬಂದಿಲ್ಲ. ಈಗ ಚುನಾವಣೆ ಸಮೀಪಿಸುತಿದ್ದಂತೆ ಉಚಿತವಾಗಿ ಹೆಲ್ಮೆಟ್ ಕೊಟ್ಟು ಆಮಿಷ ಒಡ್ಡುತಿದ್ದಾರೆ ಎಂದು ದೂರುತಿದ್ದಾರೆ.  ಒಟ್ಟಾರೆ ಜೆಡಿಎಸ್ ಗೆ ನವ ಚೈತನ್ಯ ತುಂಬಲು ಉಚಿತವಾಗಿ ಹೆಲ್ಮೆಟ್ ವಿತರಿಸಿದ್ದು , ತುಮಕೂರು ಜಿಲ್ಲೆಯಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here