Prem Raj | ಮಂಗಳೂರು ಸ್ಪೋಟ ಪ್ರಕರಣ : ತುಮಕೂರಿನ ನಂಟಿದ್ಯಾ..?

0
28

ತುಮಕೂರು | ಮಂಗಳೂರು ಸ್ಫೋಟಕ್ಕೂ ನನಗೂ ಸಂಬಂಧವಿಲ್ಲ ಪೊಲೀಸರ ವಿಚಾರಣೆಗೆ ಸ್ಪಂದಿಸುತ್ತೇನೆ ಎಂದು ತುಮಕೂರಲ್ಲಿ ರೈಲ್ವೇ ಇಲಾಖೆಯಲ್ಲಿ ಟ್ರಾಕ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಪ್ರೇಮ್ ರಾಜ್ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಮಂಗಳೂರು ಸ್ಪೋಟ ಪ್ರಕರಣದಲ್ಲಿ ನಕಲಿ ಆಧಾರ ಕಾರ್ಡ್ ಬಳಕೆ ಮಾಡಿಕೊಳ್ಳಲಾಗಿದೆ. ಅದು  ಪ್ರೇಮ್ ರಾಜ್ ಹುಟಗಿ ಎಂಬ ವ್ಯಕ್ತಿಯ ಆಧಾರ ಕಾರ್ಡ್ ಆಗಿದ್ದು ಅಸಲಿ ಪ್ರೇಮ್ ರಾಜ್ ಹುಟಗಿ, ಹುಬ್ಬಳ್ಳಿ ಮೂಲದ ವ್ಯಕ್ತಿಯಾಗಿದ್ದಾರೆ.

ತುಮಕೂರಿನಲ್ಲಿ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಪ್ರೇಮ್ ರಾಜ್ ಹುಟಗಿ, 6 ತಿಂಗಳ ಹಿಂದೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದನು.  ಒಂದು ಬಾರಿ ಧಾರವಾಡ-ಹುಬ್ಬಳಿಗೆ ಹೋಗುವ ವೇಳೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು ಮತ್ತೊಂದು ಬಾರಿ ಹುಬ್ಬಳ್ಳಿ- ಹಾವೇರಿಗೆ ಬರುವ ವೇಳೆ ಆಧಾರ್ ಕಾರ್ಡ್ ಮಿಸ್ ಆಗಿತ್ತು. 

ಕಳೆದ ಮೂರು ವರ್ಷದಿಂದ ತುಮಕೂರಿನಲ್ಲಿ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ತುಮಕೂರಿನ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು.  ನಿನ್ನೆ ಬೆಳಗ್ಗೆ ಪ್ರೇಮ್ ರಾಜ್ ಗೆ ಕರೆ ಮಾಡಿರುವ ಎಡಿಜಿಪಿ ಅಲೋಕ್ ಕುಮಾರ್ ತುಮಕೂರು ಎಸ್ಪಿ ಭೇಟಿ ಮಾಡುವಂತೆ ಪ್ರೇಮ್ ಕುಮಾರ್ ಗೆ ಸೂಚನೆ ನೀಡಿದ್ದರು.  ಅದರಂತೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ರನ್ನು ಪ್ರೇಮ್ ರಾಜ್ ಬೇಟಿ ಮಾಡಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here