ಸಿನಿಮಾ | ಕನ್ನಡದ ಚಿತ್ರರಂಗದ ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ಸದಾ ಒಂದಿಲ್ಲ ಒಂದು ಹೊಸ ತರದ ಚಿತ್ರಗಳನ್ನು ನಿರ್ದೇಶನ ಮಾಡುವ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಮನರಂಜನೆಯ ಔತಣವನ್ನು ನೀಡುತ್ತಾ ಬರುತ್ತಿದ್ದಾರೆ. ಇದೀಗ ಅವರು ನಟ ದ್ರುವ ಸರ್ಜಾ ಅವರೊಂದಿಗೆ ಸಿನಿಮಾ ಅನೌನ್ಸ್ ಮಾಡಿದ್ದು ಈ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಹೌದು,, ಸ್ಯಾಂಡಲ್ ವುಡ್ ನ ಪವರ್ ಪ್ಯಾಕ್ ನಟ ಧ್ರುವ ಸರ್ಜಾ ಮಾಡಿದ ಅಷ್ಟು ಚಿತ್ರಗಳು ಭರ್ಜರಿ ಹಿಟ್ ಆಗಿವೆ. ಇದೀಗ ಸೂಪರ್ ಹಿಟ್ ನಿರ್ದೇಶಕರ ಜೊತೆ ಸಿನಿಮಾ ಮಾಡಲು ಹೊರಟಿದ್ದು, ಇದು ಇಡೀ ಭಾರತ ಚಿತ್ರರಂಗ ತಿರುಗಿ ನೋಡುವಂತೆ ಆಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಇನ್ನು ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರದ ಟೈಟಲ್ ಟೀಸರ್ ಅಕ್ಟೋಬರ್ 20ರಂದು ಬಿಡುಗಡೆಯಾಗಲಿದೆ. ಈ ಮಧ್ಯೆ ಅಧೀರ ಸಂಜಯ್ ದತ್ ಅವರನ್ನು ಭೇಟಿ ಮಾಡಿದ್ದಾರೆ.
ನಟ ಪ್ರೇಮ್ ನಿರ್ದೇಶನದ ಈ ಹೊಸ ಚಿತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡಲು ಶುರುವಾಗಿದೆ. ಈ ಬಗ್ಗೆ ಚಿತ್ರತಂಡವೆ ಅಧಿಕೃತವಾಗಿ ಮಾಹಿತಿ ನೀಡಬೇಕಿದೆ.
[…] ➤ WATCH FULL MOVIE NOW! Kantara […]
Very nice
Comments are closed.