Political Hatred | ರಾಜಕೀಯ ದ್ವೇಷ : ಕೆರೆಗೆ ವಿಷ ಹಾಕಿ ಲಕ್ಷಾಂತರ ಮೀನುಗಳನ್ನು ಕೊಂದ ದುಷ್ಕರ್ಮಿಗಳು..!

0
142

ಕುಣಿಗಲ್ | ರಾಜಕೀಯ ದ್ವೇಷದ ಹಿನ್ನಲೆಯಲ್ಲಿ ದುಷ್ಕರ್ಮಿಗಳು ಕೆರೆಗೆ ವಿಷ ಹಾಕಿ ಸಾವಿರಾರು ಮೀನುಗಳು ದಾರೂಣವಾಗಿ ಸವನ್ನಪ್ಪುವಂತೆ ಮಾಡಿರುವ ಘಟನೆ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ವಡಾಘಟ್ಟ ಗ್ರಾಮದ ಕೆರೆಯಲ್ಲಿ ನಡೆದಿದೆ.

ವಡಾಘಟ್ಟ ಗ್ರಾಮದ ಕೆರೆಯನ್ನು ಗುತ್ತಿಗೆ ಪಡೆದಿದ್ದ ಚಂದನ್ ಮೀನು ಸಾಕಾಣಿಕೆ ಮಾಡಿದ್ದರು. ಚಂದನ್, ಜೋಡಿ ಹೊಸಹಳ್ಳಿ ಗ್ರಾಮದ ಪಂಚಾಯ್ತಿ ಸದಸ್ಯೆ ಚೈತ್ರರವರ ಪತಿ. ಕಳೆದ 2 ತಿಂಗಳ ಹಿಂದೆ ಐದೂವರೆ ಲಕ್ಷ ಮೀನಿನ ಮರಿಗಳನ್ನ ಕೆರೆಗೆ ಬಿಟ್ಟಿದ್ದರು ಚಂದನ್.

ರಾಜಕೀಯ ದ್ವೇಷಕ್ಕೆ ತಡರಾತ್ರಿ ಕಿಡಿಗೇಡಿಗಳು ಚಂದನ್ ಗುತ್ತಿಗೆ ಪಡೆದಿದ್ದ ಕೆರೆಗೆ ವಿಷ ಹಾಕಿದ್ದಾರೆ. ಕೆರೆಯ ನೀರಿಗೆ ವಿಷ ಮಿಶ್ರಣವಾದ ಹಿನ್ನೆಲೆಯಲ್ಲಿ ಕೆರೆಯಲ್ಲಿದ್ದ ಮೀನುಗಳು ದಾರೂಣವಾಗಿ ಸಾವನ್ನಪ್ಪಿವೆ. ಇನ್ನೂ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.