ಕೊರಟಗೆರೆ | ಈಜಾಡಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ಕೊರಟಗೆರೆ ತಾಲೂಕಿನ ತುಂಬಾಡಿ ಕೆರೆಯಲ್ಲಿ ನಡೆದಿದೆ. ಮೃತರನ್ನು ಕೃಷ್ಣಪ್ಪ ಮತ್ತು ನಿತಿನ್ ಕುಮಾರ್ ಎಂದು ಗುರುತಿಸಲಾಗಿದೆ. ನಿತಿನ್ ಕುಮಾರ್ ನನ್ನು ರಕ್ಷಿಸಲು ಹೋಗಿ ಕೃಷ್ಣಪ್ಪ ಸಾವನ್ನಪ್ಪಿದ್ದಾರೆ.
ಕೊರಟಗೆರೆ ತಾಲೂಕಿನ ತುಂಬಾಡಿ ಕೆರೆಯಲ್ಲಿ ಸಂಬಂಧೀಕರ ಮನೆಗೆ ಬಂದಿದ್ದ ಬಾಲಕ ನಿತಿನ್ ಕುಮಾರ್ ತುಂಬಾಡಿ ಕೆರೆ ತುಂಬಿದ್ದರಿಂದ ಅದನ್ನು ನೋಡಬೇಕು ಎಂದು ಹಠ ಮಾಡುತ್ತಾನೆ. ಈ ವೇಳೆ ಕೃಷ್ಣಪ್ಪ ಅವನನ್ನು ಕೆರೆಯ ಬಳಿಗೆ ಕರೆದುಕೊಂಡು ಹೋಗುತ್ತಾರೆ. ಬೇರೆ ಯುವಕರು ಈಜಾಡುತ್ತಿರುವುದನ್ನು ನೋಡಿ ತಾನು ಈಜಾಡಬೇಕು ಎಂದು ಎಷ್ಟೇ ಹೇಳಿದರು ಬಲವಂತ ಮಾಡಿ ನೀರಿಗೆ ಇಳಿಯುತ್ತಾನೆ.
ಈ ವೇಳೆ ದಡದಲ್ಲಿ ಈಜಾಟಡುತ್ತಿದ್ದವನು ಸ್ವಲ್ಪ ಮುಂದೆ ಹೋಗುತ್ತಾನೆ ಅಲ್ಲಿ ಆಳವಿದ್ದುದ್ದರಿಂದ ನೀರಿನಲ್ಲಿ ಮುಳುಗುತ್ತಾನೆ. ಇದನ್ನು ಕಂಡ ಕೃಷ್ಣಪ್ಪ ಆತನ ರಕ್ಷಣೆಗೆ ಹೋಗುತ್ತಾರೆ. ಈವೇಳೆ ಇಬ್ಬರು ನೀರಿನಲ್ಲಿ ಮುಳುಗುತ್ತಾರೆ. ತಕ್ಷಣವೇ ಸ್ಥಳೀಯರು ಇಬ್ಬರನ್ನು ರಕ್ಷಣೆ ಮಾಡಿ ಕೊರಟಗೆರೆ ತಾಲೂಕು ಆಸ್ಪತ್ರೆಗೆ ದಾಖಲು ಮಾಡುತ್ತಾರೆ.
ಅರ್ಧ ಗಂಟೆಗೂ ಹೆಚ್ಚು ಕಾಲ ಸರ್ಕಾರಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡದರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಬ್ಬರು ಕೊನೆಯುಸಿರೆಳೆಯುತ್ತಾರೆ. ಕೊರಟಗೆರೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.