Koratagere Crime News | ಕಾರು ಚಾಲಕನಿಗೆ ಚಾಕುವಿನಿಂದ ಇರಿದ ಬೈಕ್ ಸವಾರ..!

0
41

ಕೊರಟಗೆರೆ | ಮುಂದೆ ಹೋಗುತ್ತಿದ್ದ ಬೈಕ್ ಸವಾರನಿಗೆ ದಾರಿ ಬಿಡುವಂತೆ ಕಾರು ಚಾಲಕ ಹಾರನ್ ಮಾಡಿದ್ದಕ್ಕೆ ಏಕಾಏಕಿ ಬೈಕಿನಲ್ಲಿದ್ದ ಯುವಕರು ಕಾರಿನಲ್ಲಿದ್ದವರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವಂತಹ ಘಟನೆ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.

ಕೊರಟಗೆರೆ ತಾಲೂಕಿನ ಬೈರೇನಹಳ್ಳಿಯಲ್ಲಿ ದುರ್ಘಟನೆ ನಡೆದಿದ್ದು, ಹೇಮಂತ್ ಎಂಬ ಕಾರಿನ ಚಾಲಕ ಚಾಕುವಿನಿಂದ ಇರಿತಕ್ಕೆ ಒಳಗಾದವರಾಗಿದ್ದಾರೆ.

ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಯುವಕರು  ಕಾರನ್ನ ಅಡ್ಡಗಟ್ಟಿ ಚಾಲಕನಿಗೆ ಮನಸೋ ಇಚ್ಚೆ ನಾಲ್ಕೈದು ಬಾರಿ ಚಾಕುವಿನಿಂದ ಇರಿದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಯುವಕರು ಮಾಡಿದ ಕೃತ್ಯ ಕೊರಟಗೆರೆ ಜನರನ್ನು ಬೆಚ್ಚಿ ಬೀಳಿಸಿದೆ.