
ಮನರಂಜನೆ | ಕಾಂತಾರ ಸಿನಿಮಾ ನೋಡಿ ಥಿಯೇಟರ್ನಿಂದ ಹೊರ ಬರುತ್ತಿದ್ದಾಗ ವ್ಯಕ್ತಿಯೊಬ್ಬರಿಗೆ ಹೃದಯಾಘಾತ ಸಂಭವಿಸಿ ಮೃತಪಟ್ಟಿರೋ ಘಟನೆ ನಾಗಮಂಗಲದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ನಡೆದಿದೆ. ರಾಜಶೇಖರ್ (45) ಮೃತ ದುರ್ದೈವಿಯಾಗಿದ್ದಾನೆ.
ಮೃತ ವ್ಯಕ್ತಿಯು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸಾರೆಮೇಗಲ ಕೊಪ್ಪಲು ನಿವಾಸಿ. ಕಾಂತಾರ ಸಿನಿಮಾ ನೋಡಿ ಹೊರಬರುವ ವೇಳೆ ಏಕಾಏಕಿ ಹೃದಯಾಘಾತ ಕಾಣಿಸಿಕೊಂಡಿದೆ. ತೀವ್ರ ಹೃದಯಾಘಾತ ಸಂಭವಿಸಿ ರಾಜಶೇಖರ್ ಎಂಬುವವರು ವೆಂಕಟೇಶ್ವರ ಚಿತ್ರಮಂದಿರ ಒಳಾವರಣದಲ್ಲೇ ಮೃತಪಟ್ಟಿದ್ದಾರೆ.
ಸದ್ಯ ಘಟನಾ ಸ್ಥಳಕ್ಕೆ ನಾಗಮಂಗಲ ಪಟ್ಟಣ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತಂತೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Supar movie
Comments are closed.