ನಿಮ್ಮ ಆಶೀರ್ವಾದವಿದ್ದರೆ 2023 ರ ನಂತರ ಸಚಿವನಾಗುತ್ತೇನೆ – ಮಸಾಲೆ ಜಯರಾಮ್

0
9

ತುರುವೇಕೆರೆ | ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಪಟ್ಟಣಕ್ಕೆ ಆಗಮಿಸಿ ಗ್ರಾಮದೇವತೆ ಶ್ರೀ ಉಡುಸಲಮ್ಮ ದೇವಿಗೆ ಪೂಜೆ ಸಲ್ಲಿಸಿ, ಬಿಜೆಪಿ ಕಛೇರಿಯಲ್ಲಿ ಅಭಿನಂದನೆ ಸ್ವೀಕರಿಸಿದ ಶಾಸಕ ಮಸಾಲೆ ಜಯರಾಮ್, ನಿಮ್ಮ ಹೋರಾಟದ ಫಲವಾಗಿ ತುರುವೇಕೆರೆ ಕ್ಷೇತ್ರದ ಶಾಸಕನಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ದುಡಿಯುತ್ತಿದ್ದೇನೆ. ನಿಮ್ಮಿಂದಲೇ ನಾನು ಮಿನರಲ್ ಕಾರ್ಪೋರೇಷನ್ ನ ಅಧ್ಯಕ್ಷನಾಗಿದ್ದೇನೆ. ಪಕ್ಷದ ಮುಖಂಡರ, ಕಾರ್ಯಕರ್ತರ ಶ್ರಮದಿಂದ ನನಗೆ ಅಧಿಕಾರ ದೊರೆತಿದ್ದು, ಹತ್ತು ಜನ್ಮವೆತ್ತಿದರೂ ನಿಮ್ಮ ಋಣ ತೀರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

2023ರಲ್ಲಿ ನಿಮ್ಮ ಆರ್ಶೀವಾದ ದೊರೆತರೆ ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿ ತುರುವೇಕೆರೆ ಕ್ಷೇತ್ರವನ್ನು ನಂಬರ್ 01 ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ನನ್ನ ಮೇಲೆ ನಂಬಿಕೆಯಿಟ್ಟು ಸಾಂಬಾರು ಮಂಡಳಿ ಅಧ್ಯಕ್ಷನನ್ನಾಗಿ ಮಾಡಿದ್ದರು ಎಂದರು.

ಈಗ ೨ನೇ ಬಾರಿಗೆ ಸಹಸ್ರಾರು ಕೋಟಿ ರೂಗಳ ವ್ಯವಹಾರ ನಡೆಸುವ ಅದಿರಿನ ನಿಗಮದ ಅಧ್ಯಕ್ಷನನ್ನಾಗಿ ಬೊಮ್ಮಾಯಿ ನೇಮಕ ಮಾಡಿದ್ದಾರೆ. ಇದೆಲ್ಲಾ ನಾನು ಪಡೆದ ಅಧಿಕಾರವಲ್ಲ,  ಕ್ಷೇತ್ರದ ಕಾರ್ಯಕರ್ತರು, ಜನರಿಗೆ ದೊರೆತ ಅಧಿಕಾರವಾಗಿದ್ದು, ಅವರಿಗೆ ಸಲ್ಲಬೇಕೆಂದರು.

ಪಟ್ಟಣಕ್ಕೆ ಆಗಮಿಸಿದ ಶಾಸಕ, ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಅಧ್ಯಕ್ಷ ಮಸಾಲಾ ಜಯರಾಮ್ ಅವರನ್ನು ನೂರಾರು ಮಂದಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡರು.

LEAVE A REPLY

Please enter your comment!
Please enter your name here