Goat Theft | ರಾತ್ರೋರಾತ್ರಿ 13 ಮೇಕೆಗಳನ್ನು ಎಗರಿಸಿದ ಖತರ್ನಾಕ್ ಕಳ್ಳರು..!

0
18

ಕೊರಟಗೆರೆ | ಕುರಿ-ಮೇಕೆ ರೊಪ್ಪದಲ್ಲಿ ಕಟ್ಟಿದ್ದ 13 ಮೇಕೆಗಳನ್ನು ಕಳ್ಳತನ ಮಾಡಿರುವ ಘಟನೆ ಕೊರಟಗೆರೆ ತಾಲೂಕು ಎಲೆರಾಂಪುರ ಬಳಿಯ ಎಸ್. ಗೊಲ್ಲಹಳ್ಳಿಯಲ್ಲಿ ನಡೆದಿದೆ.

ಮಾಲೀಕರ ಮನೆಯ ಚಿಲಕಕ್ಕೆ ಕಡ್ಡಿ ಇಟ್ಟು ಕಳ್ಳತನ ಮಾಡಲಾಗಿದೆ ಎಂದು ರೈತ ರಂಗನಾಥ್ ಆರೋಪ ಮಾಡಿದ್ದಾರೆ.  ಗುರುವಾರ ಮಧ್ಯರಾತ್ರಿ 12:30ಕ್ಕೆ ಘಟನೆ ನಡೆದಿದ್ದು ಬುಲೆರೋ ಟೆಂಪೋದಲ್ಲಿ ಬಂದು ಮೇಕೆ ತುಂಬಿಕೊಂಡು ಕಳ್ಳರು ಪರಾರಿಯಾಗಿರುವುದಾಗಿ ತಿಳಿಸಿದ್ದಾರೆ.

ಊರಿನ ಗ್ರಾಮಸ್ಥರು ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದ್ದು, ಸಿನಿಮಿಯ ರೀತಿಯಲ್ಲಿ ಕಳ್ಳರು ತಪ್ಪಿಕೊಂಡಿದ್ದಾರೆ. ಇನ್ನೂ ಈ ಬಗ್ಗೆ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

LEAVE A REPLY

Please enter your comment!
Please enter your name here