ಕಾಂಗ್ರೆಸ್ ಪರ ಮಾತನಾಡಿ, ಪಕ್ಷಕ್ಕೆ ಹೋಗುವ ಸೂಚನೆ ನೀಡಿದ್ರ ವರುಣ್ ಗಾಂಧಿ..?

0
20

ಉತ್ತರ ಪ್ರದೇಶ : ಇತ್ತೀಚಿನ ದಿನಗಳಲ್ಲಿ, ಉತ್ತರ ಪ್ರದೇಶದ ಪಿಲಿಭಿತ್‌ನ ಸಂಸದ ವರುಣ್ ಗಾಂಧಿ ಅವರು ನಿರುದ್ಯೋಗ ಮತ್ತು ರೈತರ ಸಂಕಷ್ಟ ಸೇರಿದಂತೆ ಹಲವು ವಿಷಯಗಳ ಬಗ್ಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಇದರ ನಡುವೆ ರಾಜಕೀಯ ಬದಲಾವಣೆಯ ಊಹಾಪೋಹಗಳು ಕೆಳಿಬಂದಿದ್ದು, ಇದಾದ ಬಳಿಕ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಸಮಾಜವಾದಿ ಪಕ್ಷ ಸೇರುವ ಬಗ್ಗೆ ಚರ್ಚೆ ನಡೆದಿದೆ. ಆದರೆ, ಅವರು ಬಿಜೆಪಿ ತೊರೆಯುವ ಬಗ್ಗೆ ಅಧಿಕೃತವಾಗಿ ಸೂಚಿಸಿಲ್ಲ ಮತ್ತು ಬಿಜೆಪಿ ಕ್ರಮದ ಬಗ್ಗೆ ಮಾತನಾಡಿಲ್ಲ.

ರಾಹುಲ್ ಗಾಂಧಿ ಊಹಾಪೋಹಗಳಿಗೆ ಅಂತ್ಯ

ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಅವರು ವರುಣ್ ಗಾಂಧಿ ಅವರ ಸಿದ್ಧಾಂತವೇ ಬೇರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ. ಆದರೆ, ಮತ್ತೊಮ್ಮೆ ಪ್ರಿಯಾಂಕಾ ಗಾಂಧಿ ಮೂಲಕ ವರುಣ್ ಕಾಂಗ್ರೆಸ್ ಪ್ರವೇಶಿಸಬಹುದು ಎಂಬ ಚರ್ಚೆ ನಡೆಯುತ್ತಿದ್ದು, ಇಬ್ಬರ ನಡುವೆ ರಾಜಕೀಯ ವಿಷಯಗಳ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಆದರೆ, ಅಧಿಕೃತವಾಗಿ ಯಾರೂ ಈ ಬಗ್ಗೆ ಮಾತನಾಡಲು ಸಿದ್ಧರಿಲ್ಲ.

ವರುಣ್ ಗಾಂಧಿ ಆಗಮನದಿಂದ ಯುಪಿಯಲ್ಲಿ ಕಾಂಗ್ರೆಸ್‌ಗೆ ಅನುಕೂಲಗಳು

ಇದೇ ವೇಳೆ ಯುಪಿ ಕಾಂಗ್ರೆಸ್ ನ ಕೆಲ ಮುಖಂಡರು ವರುಣ್ ತಮ್ಮ ಪಕ್ಷಕ್ಕೆ ಸೇರ್ಪಡೆಗೊಂಡರೆ ಒಳ್ಳೆಯದು ಎಂದು ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿಯವರ ಹೇಳಿಕೆಯ ಹೊರತಾಗಿಯೂ, ಯುಪಿ ಕಾಂಗ್ರೆಸ್‌ನ ಒಂದು ವಿಭಾಗವು ರಾಜ್ಯದಲ್ಲಿ ಪಕ್ಷದ ಪುನರುಜ್ಜೀವನದ ಪ್ರಯತ್ನಗಳಿಗೆ ವರುಣ್ ಗಾಂಧಿಯಂತಹ ‘ಫೈರ್‌ಬ್ರಾಂಡ್ ನಾಯಕ’ನಿಂದ ಲಾಭವಾಗಲಿದೆ ಎಂದು ಭಾವಿಸುತ್ತದೆ.

ಇಂಡಿಯಾ ಟುಡೇ ವರದಿಯ ಪ್ರಕಾರ, ಕಾಂಗ್ರೆಸ್ ನಾಯಕರೊಬ್ಬರು ಹೆಸರು ಹೇಳಲಿಚ್ಛಿಸದ ಷರತ್ತಿನ ಮೇಲೆ, ‘ಕಾಂಗ್ರೆಸ್ ಸೇರುವ ಮೂಲಕ ಯುಪಿಯಲ್ಲಿ ವರುಣ್ ಗಾಂಧಿ ಮತ್ತು ನಮ್ಮ ಪಕ್ಷಕ್ಕೆ ಲಾಭವಾಗಲಿದೆ. ರಾಜ್ಯದಲ್ಲಿ ಕೇವಲ ಇಬ್ಬರು ಶಾಸಕರು ಮತ್ತು ಒಬ್ಬ ಸಂಸದರಿದ್ದಾರೆ. ರಾಜ್ಯ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಅವರಿಗೆ ರಾಷ್ಟ್ರಮಟ್ಟದ ಇತರ ಜವಾಬ್ದಾರಿಗಳೂ ಇವೆ. ತಳಮಟ್ಟದ ಸಮಸ್ಯೆಗಳನ್ನು ನಿರಂತರವಾಗಿ ಪ್ರಸ್ತಾಪಿಸುವ ಮೂಲಕ ಬಿಜೆಪಿಯನ್ನು ಎದುರಿಸುವ ನಾಯಕನ ಅಗತ್ಯವಿದೆ ಎಂದಿದ್ದಾರೆ.

ವರುಣ್ ಗಾಂಧಿ ಅವರ ಬೇರುಗಳು ಕಾಂಗ್ರೆಸ್ ಜೊತೆ ಸಂಪರ್ಕ

42 ವರ್ಷದ ವರುಣ್ ಗಾಂಧಿ, ದಿವಂಗತ ಸಂಜಯ್ ಗಾಂಧಿ ಮತ್ತು ಮೇನಕಾ ಗಾಂಧಿ ಅವರ ಪುತ್ರ. ಕಾಂಗ್ರೆಸ್ ವರುಣನ “ನೈಸರ್ಗಿಕ ಮನೆ” ಮತ್ತು ಅವನ ಬೇರುಗಳು ಪಕ್ಷದೊಂದಿಗಿದೆ, ಆದ್ದರಿಂದ ಸ್ವೀಕಾರಾರ್ಹತೆ ಸಮಸ್ಯೆಯಾಗುವುದಿಲ್ಲ ಎಂದು ಇನ್ನೊಬ್ಬ ಕಾಂಗ್ರೆಸ್ ನಾಯಕ ವಾದಿಸಿದ್ದಾರೆ. ‘ಬಿಎಸ್‌ಪಿ ಮಾಜಿ ನಾಯಕ ಬ್ರಿಜ್‌ಲಾಲ್‌ ಖಬ್ರಿ ಅವರನ್ನು ಯುಪಿ ಘಟಕದ ಅಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್‌ ಸಮರ್ಥರಾಗಿದ್ದರೆ, ಕಾಂಗ್ರೆಸ್‌ನಲ್ಲಿ ಬೇರು ಬಿಟ್ಟಿರುವ ನಾಯಕರನ್ನು ಸೇರ್ಪಡೆಗೊಳಿಸುವುದರಲ್ಲಿ ತಪ್ಪೇನಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here