ತುಮಕೂರು |ಶಿರಾ ಮತ್ತು ಕೊರಟಗೆರೆ ತಾಲೂಕಿನಲ್ಲಿ ತಾಲೂಕು ದಂಡಾಧಿಕಾರಿಯಾಗಿ ಜನಮನ್ನಣೆ ಗಳಿಸಿದ್ದ ತಹಶೀಲ್ದಾರ್ ನಹೀದಾ ಜಮ್ ಜಮ್ ಅವರು ತುಮಕೂರು ವಿಶ್ವವಿದ್ಯಾಲಯದ ಪ್ರಪ್ರಥಮ ಮಹಿಳಾ ಕುಲ ಸಚಿವರಾಗಿ ಅಧಿಕಾರ ಸ್ವಿಕರಿಸಿದ್ದಾರೆ.
ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಜನಸಾಮಾನ್ಯರ ಮನೆ ಬಾಗಿಲಿಗೆ ತೆರಳಿ ಅವರ ಕಷ್ಟಗಳನ್ನು ಆಲಿಸುವ ಮೂಲಕ ಜನ ಸ್ನೇಹಿ ಅಧಿಕಾರಿಯಾಗಿ ಗುರ್ತಿಸಿಕೊಂಡಿದ್ದರು. ಕೋವಿಡ್ ಸಮಯದಲ್ಲಿ ಶಿರಾ ತಹಶೀಲ್ದಾರ್ ಆಗಿದ್ದ ಅವರು ಗಾಲಿಗೆ ಚಕ್ರ ಕಟ್ಟಿಕೊಂಡು ಕೆಲಸ ಮಾಡಿದ್ದರು. ಈ ಮೂಲಕವಾಗಿ ಜನ ಮೆಚ್ಚುಗೆ ಪಡೆದಿದ್ದರು.
ತಹಶೀಲ್ದಾರ್ ಆಗಿದ್ದ ನಹೀದಾ ಜಮ್ ಜಮ್ ರವರು ತುಮಕೂರು ವಿಶ್ವವಿದ್ಯಾಲಯದ ಮತ್ತು ಮೊದಲ ಮಹಿಳಾ ಕುಲ ಸಚಿವರಾಗಿ ಬಂದಿದ್ದು, ವಿಶ್ವವಿದ್ಯಾನಿಲಯ ಮೊದಲ ಮಹಿಳಾ ಕುಲಸಚಿವರು ಬಂದಿರುವುದರಿಂದ ಮಹಿಳಾ ಸಿಬ್ಬಂದಿ ಮತ್ತು ವಿಶ್ವವಿದ್ಯನಿಲಯದ ವಿದ್ಯಾರ್ಥಿನಿಯರಿಗೆ ಖುಷಿ ತಂದಿದೆ.