CRIME NEWS | ಮಧುಗಿರಿಯಲ್ಲಿ ತಡ ರಾತ್ರಿ ನಡೆಯಿತು ಡಬ್ಬಲ್ ಮರ್ಡರ್ : ಪೊಲೀಸರ ವಿರುದ್ಧ ರೊಚ್ಚಿಗೆದ್ದ ಸ್ಥಳೀಯರು..!

0
57

ತುಮಕೂರು | ನಿವೇಶನವೊಂದರ ಗಲಾಟೆ ತಾರಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿರುವ ದಾರೋಣ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಪಟ್ಟಣದ ಪ್ರಬಲ ಮುಖಂಡರಲ್ಲಿ ಗುರುತಿಸಿಕೊಂಡಿದ್ದ ಶ್ರೀಧರ್ ಗುಪ್ತ ಮತ್ತು ಆತನ ಸಹಚರರು ಗುರುವಾರ ರಾತ್ರಿ ಮಿಡಿಗೇಶಿ ಗ್ರಾಮದ ಶಿಲ್ಪ (35) ಮತ್ತು ರಾಮಾಂಜಿನೇಯ (42) ಎಂಬುವವರ ಮೇಲೆ ದಾಳಿ ಮಾಡಿದ್ದು, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ಘಟನೆಯಲ್ಲಿ ಶಿಲ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ರಾಮಾಂಜಿನೇಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮತ್ತೋರ್ವ ಮಲ್ಲಿಕಾರ್ಜುನ ಅವರಿಗೆ ಗಂಭೀರ ಗಾಯವಾಗಿವೆ. ಇದೀಗ ಮಿಡಿಗೇಶಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇನ್ನೂ ಕೊಲೆ ಆರೋಪಿಯನ್ನು ಬಂಧಿಸಿ ನಂತರ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಮತ್ತು ಕುಟುಂಬ ವರ್ಗದವರು ಪೊಲೀಸರ ವಿರುದ್ಧ ಆರೋಪ ಮಾಡಿದ್ದು, ಸ್ಥಳದಲ್ಲೆ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ ಘಟನೆ ಕೂಡ ಇಂದು ನಡೆದಿದೆ.

LEAVE A REPLY

Please enter your comment!
Please enter your name here