ಆರೋಗ್ಯ ಸಲಹೆ | ಎಷ್ಟೋ ಜನರು ಕಾಂಡೋಮ್ ಧರಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಅಷ್ಟು ಸುಖ ಸಿಗುವುದಿಲ್ಲ ಎಂದು ಹೇಳುತ್ತಾರೆ. ಆಗಿದ್ದು ಆಗಲಿ ನಾನು ಹಾಗೆ ಮಾಡುತ್ತೇನೆ ಎಂದು ಸುಖ ಅನುಭವಿಸುತ್ತಾರೆ. ಆದರೆ ಕೊನೆಗೆ ಅನೇಕ ಸಮಸ್ಯೆಗಳನ್ನ ಎದುರಿಸುತ್ತಾರೆ.
ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯ ಪ್ರಕಾರ, ಕಾಂಡೋಮ್ ಬಳಕೆ ಮಾಡುವುದರಿಂದ ಎಚ್ ಐವಿ ಸೇರಿದಂತೆ ಅನೇಕ ಮಾರಕ ರೋಗಗಳು ಹರಡುವುದು ತಪ್ಪಿಸಬಹುದಾಗಿದೆ. ಕಾಂಡೋಮ್ ಒಂದು ದೈಹಿಕ ತಡೆಯಾಗಿ ಕಾರ್ಯನಿರ್ವಹಣೆ ಮಾಡುತ್ತದೆ. ಕಾಂಡೋಮ್ ಬಳಕೆ ಮಾಡಿದರೆ ಸಣ್ಣ ಲೈಂಗಿಕ ರೋಗಕಾರಕಗಳು ಕೂಡ ಬರುವುದಿಲ್ಲ ಎನ್ನುತ್ತದೆ ವರದಿ.
ಮಾತ್ರವಲ್ಲದೆ ಸುರಕ್ಷಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ನಿಮಗೆ ಹಾಗೂ ನಿಮ್ಮ ಸಂಗಾತಿಗೆ ಕೂಟಡ ತುಂಬಾ ಒಳ್ಳೆಯದು. ನೀವು ಗರ್ಭಧಾರಣೆಯ ಚಿಂತೆ ಮಾಡಬೇಕಾಗಿಲ್ಲ. ಈ ಕ್ರಿಯೆಯನ್ನು ಆನಂದಿಸಬಹುದು. ನೀವು ಯಾವುದೇ ರೀತಿಯ ಗರ್ಭ ನಿರೋಧಕ ಮಾತ್ರೆಗಳನ್ನು ಸೇವನೆ ಮಾಡುತ್ತಲಿದ್ದರೂ ಕೂಡ ಕಾಂಡೋಮ್ ಬಳಸಿದರೆ ಉತ್ತಮ.