C N Halli Water Problem | ರಸ್ತೆಯ ಮೇಲೆ ಹರಿಯುತ್ತಿರುವ ನೀರು : ಮನೆಯ ಮಾಲೀಕರಿಗೆ ಬೇಕಿಲ್ಲ, ಅಧಿಕಾರಿಗಳು ಕೇಳಲ್ಲ..!

0
23

ಚಿಕ್ಕನಾಯಕನಹಳ್ಳಿ | ಮನೆಗಳ ಮಾಲೀಕರ ಉದಾಸಿನದಿಂದ ರಸ್ತೆಯ ಮೇಲೆ ಮನೆಯ ನೀರು ಹರಿದು ಶಾಲಾ ಕಾಲೇಜು ವಿದ್ಯಾರ್ಥಿಗಳು ರಸ್ತೆಯ ಮೇಲೆ ಹರಿಯುತ್ತಿರುವಂತಹ ನೀರಿನಲ್ಲೆ ಸಂಚರಿಸಬೇಕಾದ ಪರಿಸ್ಥಿತಿ ಹುಳಿಯಾರು ಪಟ್ಟಣದ ರಾಜ್ ಕುಮಾರ್ ರಸ್ತೆಯಲ್ಲಿ ಕಂಡು ಬಂದಿದೆ.

ವಾಹನಗಳು ಓಡಾಡುವಾಗ ಪಾದಾಚಾರಿಗಳಿಗೆ ನೀರು ಸಿಡಿಯುತ್ತಿದೆ. ಸಮವಸ್ತ್ರದಲ್ಲಿ ವಿದ್ಯಾರ್ಥಿಗಳು ರಸ್ತೆಯಲ್ಲಿ ಹೋಗುವಾಗ ಮೈ ಮೇಲೆ ಸಿಡಿದಿದೆ.  ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಅಮೂಲ್ಯವಾದ ನೀರನ್ನು ಮನೆಯ ಮಾಲೀಕರು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಅಸಹಾಯಕ ಸ್ಥಿತಿಯಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿದ್ದಾರೆ ಎಂದು  ಸ್ಥಳೀಯ ನಿವಾಸಿಗಳು ಹಾಗೂ ಸ್ಥಳೀಯ ಅಂಗಡಿಯ ಮಾಲೀಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here