BREAKING NEWS | ಹಾಲಿ ಶಾಸಕ ಡಿ. ಸಿ. ಗೌರಿಶಂಕರ್ ಮೇಲೆ ದಾಖಲಾಯ್ತು ಎಫ್.ಐ.ಆರ್..!

0
41

ತುಮಕೂರು | ಮಾಜಿ ಶಾಸಕ ಸುರೇಶ್ ಗೌಡ ಕೊಲೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಡಿ ಸಿ ಗೌರಿಶಂಕರ್ ಸೇರಿ ಮೂವರ ವಿರುದ್ದ ಎಫ್ಐಆರ್ ದಾಖಲಾಗಿದೆ.

ಮಾಜಿ ಶಾಸಕ ಸುರೇಶ್ ಗೌಡ ಕೊಟ್ಟ ದೂರಿನನ್ವಯ ಶಾಸಕ ಗೌರಿಶಂಕರ್, ಅವರ ಆಪ್ತ ಹಿರೇಹಳ್ಳಿ ಮಹೇಶ್, ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ ಅಟ್ಟಿಕಾ ಬಾಬು ವಿರುದ್ಧ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಭಾರಿ ವಾಹನದಿಂದ ಅಪಘಾತ ಮಾಡಿಸಿ ಕೊಲೆ ಮಾಡುವ ಸಂಚು ರೂಪಿಸಿದ್ದರು ಎಂದು ದೂರು ನೀಡಲಾಗಿದೆ. ಇನ್ನೂ ತುಮಕೂರಿನ ಮಾಜಿ ಮೇಯರ್ ಗಡ್ಡ ರವಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾದ ಸುಜಯ್ ಭಾರ್ಗವ್ ಗೆ ಸುಪಾರಿ ನೀಡಲಾಗಿತ್ತು ಎಂದು ಆರೋಪ ಮಾಡಲಾಗಿದೆ.

ಸುಜಯ್ ಭಾರ್ಗವ್ ಗೆ 5 ಕೋಟಿ ರೂಗೆ ಸುಪಾರಿ ನೀಡಿದ್ದಾರೆ ಎಂದು ದೂರಿನಲ್ಲಿ ದಾಖಲು ಮಾಡಲಾಗಿದ್ದು, ಸುಪಾರಿ ವೆಚ್ಚವನ್ನು ಅಟ್ಟಿಕಾ ಬಾಬು ಭರಿಸುತ್ತಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ. ಇನ್ನೂ ಜೆಡಿಎಸ್ ಮುಖಂಡ ಅಟ್ಟಿಕಾ ಬಾಬು ತುಮಕೂರು ನಗರ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದಾರೆ.