BREAKING NEWS | ತುಮಕೂರಿನ ಜೆಲ್ಲಿ ಕ್ರಷರ್ ಕ್ವಾರಿಯಲ್ಲಿ ಭೀಕರ ಅವಘಡ..!

0
28

ತುಮಕೂರು | ತುಮಕೂರು ಗ್ರಾಮಾಂತರ ಹೊಸಹಳ್ಳಿ ಸಮೀಪವಿರುವ ಗೌರಿ ಅಕ್ಷಯ ಜೆಲ್ಲಿ ಕ್ರಷರ್ ನ ಕ್ವಾರಿಯಲ್ಲಿ ಕೆಲಸ ಮಾಡುವಾಗ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಕಾರ್ಮಿಕ ಕೊಳ್ಳೇಗಾಲ ತಾಲ್ಲೂಕಿನ ಬಿದರಹಳ್ಳಿ ಗ್ರಾಮದ ಈರಣ್ಣ ಎಂದು ತಿಳಿದು ಬಂದಿದೆ.

ಇದೇ ಕ್ವಾರಿಯಲಿ ನಾಲ್ಕೈದು ತಿಂಗಳ ಹಿಂದೆ ಕೂಡ ಕಾರ್ಮಿಕನೊಬ್ಬ ಕೆಲಸ ಮಾಡುವಾಗ ಮೃತಪಟ್ಟಿದ್ದನು, ಈ
ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಸಂಭವಿಸಿದೆ.

ಒಟ್ಟು ಹದಿನಾರು ಎಕರೆಯ ಪ್ರದೇಶದಲ್ಲಿ ಗೌರಿ ಅಕ್ಷಯ ಕ್ವಾರಿಯವರು ಕೆಲಸ ಮಾಡುತ್ತಿದ್ದು, ಈ ಕ್ವಾರಿಯು ಬಹುತೇಕ ಪ್ರದೇಶ ಕಡಿದಾದ ಬಂಡೆಗಲಿನ ಬೆಟ್ಟವಾಗಿದೆ. ಕಾರ್ಮಿಕರು ಹಗ್ಗ ಕಟ್ಟಿಕೊಂಡು ಕಡಿದಾದ ಬೆಟ್ಟಹತ್ತಿ ಬಂಡೆಗೆ ರಂದ್ರ ಕೊರೆದು‌ ಬ್ಲಾಸ್ಟ್ ಮಾಡಬೇಕಾಗಿದೆ.
ಹೀಗೆ ಬಂಡೆಗೆ‌ ರಂದ್ರ ಕೊರಯುವಾಗ ಕಾರ್ಮಿಕ ಈರಣ್ಣ ಅಯತಪ್ಪಿ ಬಂಡೆ ಮೇಲಿಂದ ಕೆಳಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಕಾರ್ಮಿಕರು ಕ್ವಾರಿಗಳಲ್ಲಿ ಕೆಲಸ ಮಾಡುವಾಗ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮಾಲಿಕರಿಗೆ ತಿಳಿಸುತ್ತೇವೆ ಕೆಲವು ಕಡೆ ಇದನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ಕ್ರಷರ್ ಮಾಲಿಕರನ್ನು ಕರೆದು ಸಭೆ ನಡೆಸುತ್ತೇನೆ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಲ್ಲಿ ಕ್ರಷರ್ ಮಾಲಿಕ ರಂಗನಾಥ್ ಲಾಡ್ ಇಂದು ರಜೆ ನೀಡಿದೇವೂ, ನಿನ್ನೆ ಕೆಲಸ ಮಾಡುವಾಗ ಬಂಡೆ ಕೊರೆಯುವ ಸಲಕರಣಗಳನ್ನು ಬೆಟ್ಟದ ಮೇಲೆ ಬಿಟ್ಟು ಬಂದಿದ್ದ, ಇಂದು ಆ ಸಲಕರಣಗಳನ್ನು ತೆಗೆದುಕೊಂಡು ಬರಲು ಹೋಗಿ ಪಾಚಿ ಮೇಲೆ ಕಾಲಿಟ್ಟು ಕೆಳಗೆ ಬಿದ್ದು ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ಕಾರ್ಮಿಕರು ಹೇಳುವ ಪ್ರಕಾರ ಕ್ವಾರಿ ಮಾಲಿಕರು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದ ಪರಿಣಾಮ ಹಾಗೂ ಕ್ವಾರಿಯಲ್ಲಿ ಕೆಲಸ ಮಾಡುವಾಗ ಬೆಟ್ಟ ಹತ್ತಿ ಪುನಃ ಇಳಿಯಲು ದಾರಿ ಇಲ್ಲದ ಪರಿಣಾಮ ಈ ಅವಘಡ ನಡೆದಿದೆ ಎಂದು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here