ಮಾದಕ ದ್ರವ್ಯ ದಂಧೆಕೋರರ ಮನೆಗಳ ಮೇಲೆ ದಾಳಿ..!

0
13

ಮೈಸೂರು |  ಬೆಳ್ಳಂ ಬೆಳಗ್ಗೆ ಮೈಸೂರು ನಗರ ಪೊಲೀಸರು ಕೆಲವು ಮಾದಕ ದ್ರವ್ಯ ದಂಧೆಕೋರರ ಮನೆಗಳ ಮೇಲೆ ದಾಳಿ ನಡೆಸಿ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ.

ಜಿಲ್ಲಾಧಿಕಾರಿ ಎಂ.ಮುತ್ತುರಾಜ್ ನೇತೃತ್ವದ ಪೊಲೀಸ್ ತಂಡಗಳು ನಗರದಾದ್ಯಂತ 30 ಮನೆಗಳ ಮೇಲೆ ದಾಳಿ ನಡೆಸಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಮುಂಜಾನೆ 4 ಗಂಟೆಯಿಂದ 7 ಗಂಟೆಯೊಳಗೆ ಸುಮಾರು 40 ತಂಡಗಳು ಮನೆಗಳ ಮೇಲೆ ದಾಳಿ ನಡೆಸಿ ಶ್ವಾನದಳದ ಸಹಾಯದಿಂದ ತಪಾಸಣೆ ನಡೆಸಿ ಮನೆಗಳಿಂದ ಒಟ್ಟು 500 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಆಯುಕ್ತ ಬಿ ರಮೇಶ್ ಬಾನೋತ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here