About Us

ಆತ್ಮೀಯರ ಓದುಗರಿಗೆ ನಿಮ್ಮದೇ ವೇದಿಕೆಗೆ ನಮ್ಮಿಂದ ಸ್ವಾಗತ ಸುಸ್ವಾಗತ.

ಸಮಾಜದ ದಿಕ್ಕನ್ನು ಬದಲಾಯಿಸಲು, ಹೊಸ ಆಲೋಚನೆಯೊಂದಿಗೆ ಬದಲಾವಣೆಯ ಪರ್ವ ಆರಂಭಿಸಲು. ವೃತ್ತಿಪರ ಅನುಭವಿ ಪತ್ರಕರ್ತರಿಂದ ಹುಟ್ಟಿದ್ದೇ Spot News ಕನ್ನಡ ವೆಬ್ ಪೋರ್ಟಲ್.

ಸುದ್ದಿಗಳನ್ನು ಹೀಗೂ ಕೂಡ ನೀಡಬಹುದು. ಮಾಹಿತಿಯನ್ನು ಹೀಗೂ ಕೂಡ ತಲುಪಿಸಬಹುದು. ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬಹುದು ಎಂದು ತೋರಿಸಿಕೊಡುವ ಸಲುವಾಗಿ ವಸ್ತುನಿಷ್ಠ ಸಾಮಾಜಿಕ ಕಳಕಳಿಯುಳ್ಳ ಮನಸುಗಳ ಪತ್ರಕರ್ತರ ಅಂಗಳ Spot News ಕನ್ನಡ ವೆಬ್ ಪೋರ್ಟಲ್.

ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ, ಕೃಷಿ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆಯ ಜೊತೆಗೆ ಮನರಂಜನಾತ್ಮಕ ವಿಷಯಗಳನ್ನು ಓದುಗರ ಮುಂದಿಟ್ಟು ಅವರಿಂದ ಪ್ರಾಮಾಣಿಕ ಪ್ರತಿಕ್ರಿಯೆಯನ್ನು ಪಡೆದು ಸಮಾಜಕ್ಕೆ ಏನನ್ನು ಬೇಕು ಅದನ್ನು ನೀಡುವ ಪ್ರಯತ್ನ ಮಾಡುವುದೇ Spot News ಕನ್ನಡ ವೆಬ್ ಪೋರ್ಟಲ್ ನ ಪ್ರಮುಖ ಉದ್ದೇಶ.

ಇಲ್ಲಿ ಅರಚಾಟ ವಿಲ್ಲ, ಕಿರುಚಾಟ ವಿಲ್ಲ, ಓದುಗರನ್ನು ಬೆಚ್ಚಿ ಬೀಳಿಸುವಂತಹ ಸುದ್ದಿಯನ್ನು ನೀಡುವುದಿಲ್ಲ, ನಾವು ಹೇಳಿದ್ದೇ ಸರಿ ಎಂದು ಒಪ್ಪಿಕೊಳ್ಳುವಂತೆ ಬಲವಂತ ಮಾಡುವುದಿಲ್ಲ, ಸುದ್ದಿ ಅಥವಾ ಮಾಹಿತಿ ನೀಡುವುದು ನಮ್ಮ ಜವಾಬ್ದಾರಿ ಅದನ್ನು ಒಪ್ಪಿ ಮುನ್ನಡೆಯುವುದು ಓದುಗರಿಗೆ ಬಿಟ್ಟದ್ದು.

ಉತ್ತಮ ಆಲೋಚನೆಯಲ್ಲಿ, ಅತ್ಯುತ್ತಮ ಮನಸ್ಸುಗಳ ಸಮಾಜಮುಖಿ ಸುದ್ದಿಗಳನ್ನು ಬಿತ್ತರ ಮಾಡುವ ಸ್ಪಾಟ್ ನ್ಯೂಸ್ ಕನ್ನಡದ ಬಗ್ಗೆ ಇದಿಷ್ಟು ಸಾಕು ಅನ್ನಿಸುತ್ತದೆ.