ಸ್ವಪಕ್ಷಿಯರಿಂದಲೇ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಆಕ್ರೋಶ..!

0
33

ಶಿವಮೊಗ್ಗ | ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗುತ್ತಿರುವ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಮೂಲ ಹಾಗೂ ವಲಸೆ ಕಾರ್ಯಕರ್ತರ ನಡುವೆ ಮೊದಲಿನಿಂದಲೂ ನಡೆಯುತ್ತಿರುವ ಮುಸುಕಿನ ಗುದ್ದಾಟ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಹಾಗಂತ ಶಾಸಕರ ಬೆಂಬಲಿಗರು ಸುಮ್ಮನಿಲ್ಲ. ಅವರೂ ಪಕ್ಷದ ಹಿರಿಯರಿಗೆ ತಿರುಗೇಟು ನೀಡುತ್ತಿದ್ದಾರೆ.

ಇದನ್ನು ಓದಿ | ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಸಿದ್ಧರಾಮಯ್ಯ..!

ಸೊರಬ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕರೂ ಆಗಿರುವ ನಟ ಕುಮಾರ ಬಂಗಾರಪ್ಪ ವಿರುದ್ಧ ಅದೇ ಪಕ್ಷದ ಕಾರ್ಯಕರ್ತರು ಈಗ ತಿರುಗಿ ಬಿದ್ದಿದ್ದಾರೆ. ಶಾಸಕರಾಗಿ ಕುಮಾರ್​ ಬಂಗಾರಪ್ಪ ಆಯ್ಕೆಯಾದಾಗಿನಿಂದಲು ಇರುವ ಮೂಲ ಮತ್ತು ವಲಸಿಗ ಬಿಜೆಪಿ ಕಾರ್ಯಕರ್ತರ ನಡುವಿನ ಅಂತರ ಈಗ ಮತ್ತಷ್ಟು ಹೆಚ್ಚಿದ್ದು ಪ್ರಧಾನಿ ಹುಟ್ಟು ಹಬ್ಬದಂದು ನಮೋ ವೇದಿಕೆ ಆರಂಭಿಸುವ ಮೂಲಕ ಮೂಲ ಬಿಜೆಪಿಗರು ಶಾಸಕರ ವಿರುದ್ಧ ತೊಡೆ ತಟ್ಟಿದ್ದಾರೆ. ಈ ಮೂಲಕ ಶಾಸಕ ಕುಮಾರ ಬಂಗಾರಪ್ಪ ಬಗ್ಗೆ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರ ಹಾಕಿದ್ದಾರೆ.

ಇದನ್ನು ಓದಿ | ಮ್ಯಾಸಿವ್ ಸ್ಟಾರ್ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ “ಗಜರಾಮ”ನ ಹೊಸ ಅವತಾರ..!