ವಿದ್ಯುತ್ ತಂತಿ ತುಳಿದು ದಾರೂಣವಾಗಿ ಸಾವನ್ನಪ್ಪಿದ ಯುವಕ

1
58

ತುಮಕೂರು | ಹಲಸಿನ ಹಣ್ಣು ಕೀಳಲು ಹೋಗಿ ವಿದ್ಯುತ್ ತಂತಿ ತುಳಿದು ಯುವಕನೊಬ್ಬ ದಾರೂಣವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ನಡೆದಿದೆ.

ಇಲ್ಲಿನ ಬೊಮ್ಮತ ಹಳ್ಳಿ ಗ್ರಾಮದ ನಿವಾಸಿ ಕೃಷ್ಣಪ್ಪ ಎಂಬುವರ ಪುತ್ರ ರಮೇಶ್ (20)  ಮೃತ ದುರ್ದೈವಿ.

ಹೂವಿನ ಕುಂಡದಲ್ಲಿ ಗಾಂಜಾ ಬೆಳೆದ ಅಟೋ ಚಾಲಕ

ಭಾನುವಾರ ಹಲಸಿನ ಹಣ್ಣು ಕೀಳುವ ಸಲುವಾಗಿ ಹೊಲದ ಬಳಿ ಹೋದ ಸಂದರ್ಭದಲ್ಲಿ ವಿದ್ಯುತ್ ತಂತಿ ತುಂಡಾಗಿರುವುದನ್ನು ಗಮನಿಸಿದೆ ಅದನ್ನು ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

ಇನ್ನೂ ಘಟನಾ ಸ್ಥಳಕ್ಕೆ ಶಾಸಕ ವೆಂಕಟರಮಣಪ್ಪ ಬೆಸ್ಕಾಂ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದು, ಮೃತರ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ ಮತ್ತು ಸರ್ಕಾರದಿಂದ ಸಿಗುವಂತಹ ಸವಲತ್ತುಗಳನ್ನು ಪೋಷಕರಿಗೆ ಒದಗಿಸಿಕೊಡುವ ಭರವಸೆ ನೀಡಿದ್ದಾರೆ.