ಮಹಿಳೆಗೆ ಕಾರದಪುಡಿ ಎರಚಿ ಮಾಂಗಲ್ಯಸರ ಕದಿಯಲು ಯತ್ನ : ಕಳ್ಳರಿಗೆ ಧರ್ಮದೇಟು ನೀಡಿದ ಗ್ರಾಮಸ್ಥರು

1
63

ತುಮಕೂರು | ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಹಾಲುಗೊಂಡನಹಳ್ಳಿ ಗ್ರಾಮದ ಸುಜಾತ ಎಂಬುವವರು ತೋಟಕ್ಕೆ ತರಳುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಯುವಕರು ಮಹಿಳೆಯಿಂದ ಬಲವಂತವಾಗಿ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದ ಯುವಕರು ಕಣ್ಣಿಗೆ ಕಾರದ ಪುಡಿ ಎರಚಿ ಕೊರಳಿನಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದಾರೆ. ಈ ವೇಳೆ ಮಹಿಳೆಯು ಕೂಗಾಟ ನಡೆಸಿದ್ದು ಸ್ಥಳೀಯರು ಅವರ ನೆರವಿಗೆ  ಬಂದಿದ್ದರೆ.

ತುಮಕೂರು ರಿಂಗ್ ರಸ್ತೆಯಲ್ಲಿ ಭೀಕರ ಅಪಘಾತ : ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಬೈಕ್ ಸವಾರ ದಾರೂಣ ಸಾವು

ಕಳ್ಳರು ದಾರಿ ಕಾಣದೆ ತೋಟವೊಂದರ ರಸ್ತೆಯಲ್ಲಿ ಬೈಕ್ ಓಡಿಸಿದ್ದು ಈ ವೇಳೆ ಬೈಕ್ ಮಣ್ಣಲ್ಲಿ  ಹೂತುಕೊಂಡಿದೆ. ನಂತರ ಸ್ಥಳಿಯರು ಕಳ್ಳರನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.

ಇನ್ನೂ ಈ ಘಟನೆ ದಂಡಿನಶಿವರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕಳ್ಳತನಕ್ಕೆ ಎತ್ನಿಸಿದವರು ಚನ್ನರಾಯಪಟ್ಟಣ ತಾಲ್ಲೂಕಿನ ದಿಡಗ ಗ್ರಾಮದ ಯೋಗೀಶ್ ಹಾಗೂ ರಾಕೇಶ್ ಎನ್ನಲಾಗಿದೆ. ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.