“ನನ್ನದೇನು ಕಿತ್ ಕೊಳೊಕೇ ಆಗಲ್ಲ” – ಗುಬ್ಬಿ ಶಾಸಕರಿಗೆ ಜೆಡಿಸ್ ಮುಖಂಡ ನಾಗರಾಜ್ ಟಾಂಗ್..!

0
131

ಗುಬ್ಬಿ | ಚುನಾವಣೆಗೆ 6 ತಿಂಗಳು ಬಾಕಿ ಇರುವಾಗಲೇ ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರ ಕಾದ ಕೆಂಡದಂತಾಗಿದೆ, ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ನಾಗರಾಜ್ ಹಾಲಿ ಶಾಸಕ ಎಸ್ ಆರ್ ಶ್ರೀನಿವಾಸ್ ಗೆ ಟಾಂಗ್ ನೀಡುವ ಮೂಲಕ ಬ್ಯಾಟ್ ಬೀಸಿದ್ದಾರೆ.

ಈ ವೇಳೆ ಮಾತನಾಡಿರುವ ಅವರು, ಒಂದು ಖಾಸಗಿ ಕಾರ್ಯಕ್ರಮದಲ್ಲಿ “ನನ್ನದೇನು ಕಿತ್ ಕೊಳೊಕೇ ಆಗಲ್ಲ” ಎಂದು ಹಾಲಿ ಶಾಸಕರು ಹೇಳಿದ್ದಾರೆ ಅವರಂತೆ ತುಚ್ಛವಾಗಿ ನಾನು ಮಾತನಾಡಲು ಹೋಗಲ್ಲ, ಮುಂದಿನ ದಿನಗಳಲ್ಲಿ ಗುಬ್ಬಿ ಕ್ಷೇತ್ರದ ಮಹಾ ಜನತೆ ತೋರಿಸ್ತಾರೆ. ನನ್ನದು ಸಿ.ಎಸ್. ಪುರ ಹೋಬಳಿ ಇದೇ ಗುಬ್ಬಿ ತಾಲೂಕಿನವನು, ನನಗೂ ಮಾತನಾಡೋ ಅಧಿಕಾರದ ಇದೆ ಎಂದಿದ್ದಾರೆ.

ಇದು ಪ್ರಜಾಪ್ರಭುತ್ವ, ನಾವು ಎಲ್ಲದಕ್ಕೂ ಸಿದ್ಧವಾಗಿ ಬಂದಿದ್ದೇವೆ. ಮುಂದಿನ ದಿನದಲ್ಲಿ ನಮ್ಮ ಪಕ್ಷದ ತಾಕತ್ತು ಏನಿದೆ ಎಂದು ತೋರಿಸ್ತೇವೆ ಎಂದು ಗುಬ್ಬಿ ತಾಲೂಕಿನ ಬಿದರೆಯ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಶಾಸಕ ಎಸ್ ಆರ್ ಶ್ರೀನಿವಾಸ್ಗೆ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.