ತುಮಕೂರಿನಲ್ಲಿನ ತಿಗಳ ಕ್ಷತ್ರಿಯರ ಜಾಗೃತಿ ಸಮಾವೇಶಕ್ಕೆ ಭರದ ಸಿದ್ಧತೆ

0
50

ತುಮಕೂರು | ಶ್ರೀ ಮಹಾಲಕ್ಷ್ಮಿ ತಿಗಳರ ಮಹಾಸಂಸ್ಥಾನ ಟ್ರಸ್ಟ್ ವತಿಯಿಂದ ಜಗದ್ಗುರು ಶ್ರೀ ಶ್ರೀ ಜ್ಞಾನಾನಂದ ಪುರಿ ಸ್ವಾಮೀಜಿಗಳ ಗುರುವಂದನ ಕಾರ್ಯಕ್ರಮ ಹಾಗೂ ತಿಗಳ ಕ್ಷತ್ರಿಯರ ಜಾಗೃತಿ ಸಮಾವೇಶವನ್ನು ಆಗಸ್ಟ್ 26 ರಂದು ಶುಕ್ರವಾರ ಬೆಳಗ್ಗೆ 10.30ಕ್ಕೆ ನಗರದಲ್ಲಿರುವ ಗಾಜಿನ ಮನೆ ಆವರಣದಲ್ಲಿ ಆ ಯೋಜನೆ ಮಾಡಲಾಗಿದೆ ಎಂದು ಸಮುದಾಯದ ಮುಖಂಡ ಮತ್ತು ಮಾಜಿ ಶಾಸಕ ನೆ. ಲ. ನರೇಂದ್ರಬಾಬು ತಿಳಿಸಿದರು.

ತುಮಕೂರು ನಗರದಲ್ಲಿರುವ ಸರಪಳಿ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮಾಜದಲ್ಲಿ ಶೈಕ್ಷಣಿಕ ಜಾಗೃತಿ, ಔದ್ಯೋಗಿಕ ಜಾಗೃತಿ, ಸಾಮಾಜಿಕ ಜಾಗೃತಿ ಆಗಬೇಕಿದೆ. ಸ್ವಾತಂತ್ರ ಬಂದು 75 ವರ್ಷಗಳು ಕಳೆದರೂ ಕೂಡ ಸಾಕಷ್ಟು ಹಿಂದುಳಿದಿರುವುದನ್ನು ಕಾಣುತ್ತಿದ್ದೇವೆ. ಎಲ್ಲಾ ಸಮಾಜದವರ ನಡುವೆ ನಾವು ಸಮನಾಗಿ ನಿಲ್ಲಬೇಕು ಎಂದರೆ ಸಂಘಟನೆ ಬಹಳ ಮುಖ್ಯ, ಹೀಗಾಗಿ ಗುರುವಂದನೆ ಹಾಗೂ ತಿಗಳ ಕ್ಷತ್ರಿಯರ ಜಾಗೃತಿ ಸಮಾವೇಶವನ್ನು ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಾಂಡಿಚರಿ ಮುಖ್ಯಮಂತ್ರಿ ರಂಗಸ್ವಾಮಿ, ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ರಾಜಕೀಯ ಮುಖಂಡರುಗಳು, ಸಮುದಾಯದ ಮುಖಂಡರುಗಳು ಭಾಗವಹಿಸುತ್ತಿದ್ದು ಇದು ರಾಜಕೀಯ ಸಮಾವೇಶವಲ್ಲ, ಸಮಾಜದ ಸಮಾವೇಶವಾಗಿದೆ ಎಂದು ಹೇಳಿದರು.

ಬಸ್ ನಿಲ್ದಾಣದಲ್ಲಿ ನಿಂತಿದ್ದ ಪ್ರಯಾಣಿಕನಿಗೆ ಡಿಕ್ಕಿ ಹೊಡೆದ ಬೈಕ್ : ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಹಿಟ್ ಅಂಡ್ ರನ್ ಕೇಸ್ ದಾಖಲು

ಸಮಾವೇಶದಂದು ಮುಖ್ಯಮಂತ್ರಿಗಳು ಮತ್ತು ಆಗಮಿಸುವಂತಹ ರಾಜಕೀಯ ಮುಖಂಡರ ನಡುವೆ ನಮ್ಮ ಸಮಾಜಕ್ಕೆ ಆಗಬೇಕಾಗಿರುವಂತಹ ಕೆಲಸ, ಕಾರ್ಯ, ಸೌಲಭ್ಯಗಳ ಬಗ್ಗೆ ಒಂದು ಮನವಿಯನ್ನು ಕೂಡ ಅವರ ಬಳಿ ಇಡಲಿದ್ದೇವೆ. ತುಮಕೂರು, ಬೆಂಗಳೂರು, ಕೋಲಾರ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಹಾಸನ, ಚಿಕ್ಕಬಳ್ಳಾಪುರ ಮತ್ತು ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಂದ ಸಮಾಜದ ಬಂಧುಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರು ಶ್ರೀ ಶ್ರೀ ಜ್ಞಾನಾನಂದಪುರಿ ಸ್ವಾಮೀಜಿಗಳು, ಆಗಸ್ಟ್ 26ರಂದು ನಡೆಯಲಿರುವ ಗುರುವಂದನೆ ಕಾರ್ಯಕ್ರಮ ಮತ್ತು ತಿಗಳ ಕ್ಷತ್ರಿಯರ ಜಾಗೃತಿ ಸಮಾವೇಶವು ಪ್ರಸ್ತುತ ತಿಗಳ ಸಮಾಜದವರು ಅನುಭವಿಸುತ್ತಿರುವಂತಹ ಸಂಕಷ್ಟಗಳನ್ನು ದೂರ ಮಾಡುವ ಉದ್ದೇಶದಿಂದ ಒಂದು ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ನಮ್ಮ ಬೇಡಿಕೆಗಳು, ಸಿಗಬೇಕಾದಂತಹ ಸೌಲಭ್ಯಗಳನ್ನು ಪಡೆಯಲು ಹೋರಾಟ ಮಾಡುವ ಸಮಯ ಇದಾಗಿದೆ ಎಂದು ಹೇಳಿದರು.

ಪಕ್ಷಭೇದ ಮರೆತು ಈ ಒಂದು ಕಾರ್ಯಕ್ರಮಕ್ಕೆ ಎಲ್ಲರಿಗೂ ಕೂಡ ಆಹ್ವಾನವನ್ನು ನೀಡಲಾಗಿದೆ. ನಾಡಿನ ಹಲವು ಮಠಗಳ ಮಠಾಧೀಶರುಗಳು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಉತ್ತರ ಕರ್ನಾಟಕದ ಮಾಳಿ ಸಮಾಜ ತಿಗಳ ಸಮಾಜದ ವಾಗಿದ್ದು ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ತಿಗಳರ ವಿದ್ಯಾಭಿವೃದ್ಧಿ ಸಂಘ ಮತ್ತು ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ ಎಲ್ಲ ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರೇವಣಸಿದ್ದಯ್ಯ, ಬಿಜೆಪಿ ಮಾಜಿ ನಗರ ಸಭಾಧ್ಯಕ್ಷೆ ಕಮಲಮ್ಮ, ವಿಶ್ವ ಕ್ಷತ್ರಿಯ ಮಹಾಸಂಸ್ಥಾನದ ಅಧ್ಯಕ್ಷರಾದ ಸೂರ್ಯಪ್ರಕಾಶ್, ಮುಖಂಡರಾದ ಗೋಪಾಲ್, ಸ್ಪೂರ್ತಿ ಡೆವೆಲಪರ್ಸ್ ಚಿದಾನಂದ ಗೌಡ, ಅನಂತರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.