ತಲೆಕೆಳಗಾಗಿ ಭಾರತದ ಬಾವುಟ ಮುದ್ರಿಸಿದ ಬಿಜೆಪಿ ಮುಖಂಡರು

1
57

ತುಮಕೂರು | ಭಾರತ ದೇಶದ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಹಿನ್ನಲೆಯಲ್ಲಿ ದೇಶದಾದ್ಯಂತ ಸಕಲ ಸಿದ್ಧತೆಗಳು ನಡೆಯುತ್ತಿವೆ. ಎಲ್ಲಡಿಯಲ್ಲಿಯೂ ಕೂಡ ಕೇಸರಿ ಬಿಳಿ ಹಸಿರು ತ್ರಿವರ್ಣ ಧ್ವಜಗಳು ಕಂಡುಬರುತ್ತಿವೆ. ಇದೆಲ್ಲದರ ನಡುವೆ ಫ್ಲೆಕ್ಸ್ ಗಳು ಬ್ಯಾನರ್ಗಳು ರಾರಾಜಿಸುತ್ತಿವೆ. ಆದರೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಆರೋಪ ಕೇಳಿ ಬಂದಿದೆ.

ಮಹಿಳೆಗೆ ಕಾರದಪುಡಿ ಎರಚಿ ಮಾಂಗಲ್ಯಸರ ಕದಿಯಲು ಯತ್ನ : ಕಳ್ಳರಿಗೆ ಧರ್ಮದೇಟು ನೀಡಿದ ಗ್ರಾಮಸ್ಥರು

ಹೌದು,, ದೇಶದ ಬಗ್ಗೆ ಮಾರುದ್ದ ಭಾಷಣ ಮಾಡುವ ಬಿಜೆಪಿ ಮುಖಂಡರೇ ಭಾರತ ದೇಶದ ತ್ರಿವರ್ಣ ಧ್ವಜದ ಬಣ್ಣಗಳನ್ನು ತಲೆಕೆಳಗಾಗಿ ಮುದ್ರಣ ಮಾಡಿಸಿ ಪ್ಲೆಕ್ಸ್ ಹಾಕಿಸಿ ರಾರಾಜಿಸಿದ್ದಾರೆ.

ಭೀಮನಕುಂಟೆ ಹನುಮಂತರಾಜು ಎಂಬ ಹೆಸರು ಒಳಗೊಂಡ ಮಧುಗಿರಿಯಲ್ಲಿ ತ್ರಿವರ್ಣ ಧ್ವಜ ಯಾತ್ರೆ ಕಾರ್ಯಕ್ರಮದ ಫ್ಲೆಕ್ಸ್ ಹಾಕಲಾಗಿದ್ದು ಅದರಲ್ಲಿ ಈ ರೀತಿಯಾದಂತಹ ತಪ್ಪು ನಡೆದಿದೆ. ಈ ಬಗ್ಗೆ ಸ್ಥಳೀಯ ಸಾರ್ವಜನಿಕರು ಮತ್ತು ದೇಶಭಕ್ತರಲ್ಲಿ ಆಕ್ರೋಶ ವ್ಯಕ್ತವಾಗಿದೆ.

ತಕ್ಷಣವೇ ಎಚ್ಚೆತ್ತುಕೊಂಡ ಬಿಜೆಪಿ ಮುಖಂಡರು ಫ್ಲೆಕ್ಸನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.