ಜಯರಾಜ್ ಗೆಟಪ್ಪಿನಲ್ಲೇ ಬೆಲ್ ಬಾಟಂ ತೊಟ್ಟು ಫ್ಲೈಟ್ ಹತ್ತಿದ್ದಾರೆ ಡಾಲಿ

0
46

ಮನರಂಜನೆ | ಕನ್ನಡ ಚಿತ್ರರಂಗದ ಬಹು ನೀರಿಕ್ಷೆಯ ನಟ ಡಾಲಿ ಧನಂಜಯ್ ತಮ್ಮ ಮುಂಬರುವ ಹೆಡ್ ಬುಷ್ ಚಿತ್ರದ ಭರ್ಜರಿ ಪ್ರಚಾರದಲ್ಲಿದ್ದಾರೆ. ಥೇಟ್ ಜಯರಾಜ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ.

ಹೌದು,, ದುಬೈನಲ್ಲಿ ನಡೆಯಲಿರೋ ರಾಜ್ ಕಪ್ ಗಾಗಿ ಕ್ರಿಕೆಟ್ ಆಡಲು ಹೋಗಿರುವ ಧನಂಜಯ್, ಇದರ ಜತೆಗೆ ಹೆಡ್ ಬುಷ್ ಚಿತ್ರದ ಪ್ರಚಾರವನ್ನ ಕೂಡ ಭಿನ್ನವಾಗಿ ಮಾಡುತ್ತಿದ್ದಾರೆ.

ಹೆಡ್ ಬುಷ್ ಚಿತ್ರ ಅಕ್ಟೋಬರ್ 21ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗುತ್ತಿದ್ದು, ಈ ನಡುವೆ ಧನಂಜಯ್ ವಿಶ್ವ ಪರಿರ್ಯಟನೆ ಮಾಡ್ತಾ ಸಿನಿಮಾವನ್ನ ಪ್ರಚಾರ ಮಾಡ್ತಿದ್ದಾರೆ. ಇದೀಗ ಜಯರಾಜ್ ಗೆಟಪ್ಪಿನಲ್ಲೇ ಬೆಲ್ ಬಾಟಂ ತೊಟ್ಟು ಫ್ಲೈಟ್ ಹತ್ತಿದ್ದಾರೆ ಡಾಲಿ ಧನಂಜಯ್.