ಕಾಲು ಜಾರಿ ಚೆಕ್ ಡ್ಯಾಮ್ ಗೆ ಬಿದ್ದ ಮಹಿಳೆ

0
71

ತುಮಕೂರು | ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆರೆಕಟ್ಟೆಗಳು ನದಿ ಕಾಲುಗಳು ತುಂಬಿ ಹರಿಯುತ್ತಿವೆ. ಹಳ್ಳಿಗಳ ಕಾಲುವೆಗಳಲ್ಲಿ ನಿರ್ಮಾಣ ಮಾಡುದಿರುವ ಚೆಕ್ ಡ್ಯಾಮ್ ಗಳು ತುಂಬಿವೆ. ನೀರಿನಲ್ಲಿ ಕೊಚ್ಚಿ ಹೋಗುವುದು, ಕಾಲು ಜಾರಿ ನೀರಿಗೆ ಬೀಳುವುದು ಅಲ್ಲಲ್ಲಿ ಕಂಡುಬರುತ್ತಿದೆ.

ಝಾನ್ಸಿ ರಾಣಿ ಲಕ್ಷ್ಮೀಬಾಯಿ ಆಳಿದ ಕೋಟೆ ಈಗ ಹೇಗಿದೆ..?

ಅದೇ ರೀತಿಯಾಗಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬ್ಯಾಡನೂರು ಕೆರೆ ಬಳಿಯ ಚೆಕ್ ಡ್ಯಾಮ್ ನಲ್ಲಿ ಮಹಿಳೆಯೊಬ್ಬರು ಕಾಲು ಜಾರಿ ಬಿದ್ದು ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಮೃತರನ್ನು ಬ್ಯಾಡನೂರು ಗ್ರಾಮದ ದೇವಿರಮ್ಮ ಎಂದು ಗುರುತಿಸಲಾಗಿದ್ದು, ಮಗಳು ಮತ್ತು ಸಹೋದರಿಯೊಂದಿಗೆ ಕೆರೆಯ ಹಿಂಬದಿಯ ಚೆಕ್ ಡ್ಯಾಮ್ ಬಳಿ ಹೋದಾಗ ಕಾಲು ಜಾರಿ ಬಿದ್ದು ಈ ಅವಘಡ ಸಂಭವಿಸಿದೆ.