ಅತ್ತೆ ಮನೆಗೆ ಹೊರಟ್ಟಿದ್ದವನ ಪಾಲಿಗೆ ಜವರಾಯನಾಗಿ ಬಂದ ಕೆ.ಎಸ್.ಆರ್.ಟಿ.ಸಿ : ತಲೆಯ ಮೇಲೆ ಹರಿದೆ ಬಿಡ್ತು ಹಿಂಬದಿ ಚಕ್ರ..!

0
12

ಚಿಕ್ಕಬಳ್ಳಾಪುರ | ತವರು ಮನೆಯಲ್ಲಿದ್ದ ಹೆಂಡತಿಯನ್ನ ನೋಡೊಕೆ ಅಂತ ಸ್ಕೂಟಿಯಲ್ಲೆ ಹೊರಟ ವ್ಯಕ್ತಿಯೊರ್ವ ಇನ್ನೇನು ಕೆಲವು ಕ್ಷಣಗಳಲ್ಲಿ ಪತ್ನಿಯ ತವರು ಮನೆ ತಲುಪಬೇಕಿತ್ತು, ಅಷ್ಟರಲ್ಲೆ ಜವರಾಯ ಬೆನ್ನಟ್ಟಿದ್ದ, ಪಕ್ಕದಲ್ಲೆ ಸಾಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಕೆಳಗೆ ಬಿದ್ದು ವ್ಯಕ್ತಿ ರಸ್ತೆಯಲ್ಲಿ ಹೆಣವಾದ ಘಟನೆ ನಡೆದಿದೆ.

ಈ ಸಿಸಿಟಿವಿ ದೃಶ್ಯ ನೊಡ್ತಿದ್ರೆ… ಅಪಘಾತ ಅನ್ನೊದು ಎಷ್ಟೊಂದು ಡೆಡ್ಲಿ ಅನಿಸುತ್ತೆ… ರಸ್ತೆಯಲ್ಲಿ ಸ್ಕೂಟಿಯಲ್ಲಿ ಹೊರಟಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅತ್ತಿಬೆಲೆ ನಿವಾಸಿ 33 ವರ್ಷದ ಮುರಳಿ ಆಕಸ್ಮಿಕವಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಕೆಳಗೆ ತೂರಿ ಸ್ಥಳದಲ್ಲಿ ಮೃತಪಟ್ಟ, ಇಂಥ ಭಯಾನಕ ಘಟನೆ ನಡೆದಿದ್ದು ಚಿಕ್ಕಬಳ್ಳಾಪುರ ನಗರದ ಬಿಬಿರಸ್ತೆಯಲ್ಲಿ.

ಹೌದು,,, ಮುರಳಿ ಚಿಕ್ಕಬಳ್ಳಾಪುರ ನಗರದ ಅಂಕನಗುಂದಿ ಬಡಾವಣೆಯಲ್ಲಿ ಮದುವೆ ಮಾಡಿಕೊಂಡಿದ್ದು ಪತ್ನಿಯನ್ನು ನೋಡಲು ಇಂದು ಬೆಳಂಬೇಳಿಗ್ಗೆ ಚಿಕ್ಕಬಳ್ಳಾಪುರಕ್ಕೆ ಬಂದಿದ್ದ, ಇನ್ನೇನು ಕೆಲವೆ ಕ್ಷಣಗಳಲ್ಲಿ ಅತ್ತೆಯ ಮನೆ ಸೇರಬೇಕಿತ್ತು ಅಷ್ಟರಲ್ಲಿ… ದೊಡ್ಡಬಳ್ಳಾಪುರಕ್ಕೆ ಹೊರಟಿದ್ದ ಬಸ್ನ ಪಕ್ಕದಲ್ಲೆ ಸಾಗಿದ್ದಾನೆ, ಆದ್ರೆ ಬಸ್ ಮುರಳಿಗೆ ಟಚ್ ಆಯಿತೊ ಇಲ್ಲಾ ಆಯ ತಪ್ಪಿ ಬಿದ್ದನೊ ಗೊತ್ತಿಲ್ಲ, ಬಸ್ ನ ಹಿಂಬದಿ ಚಕ್ರ ಹರಿದು ಮುರಳಿ ರಸ್ತೆಯಲ್ಲಿ ಹೆಣವಾಗಿದ್ದಾನೆ.

ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರಕ್ಕೆ ಹೊರಟಿದ್ದ ಬಸ್ ಚಾಲಕ… ತನ್ನದೇನು ತಪ್ಪಿಲ್ಲ, ಅಸಲಿಗೆ ಸ್ಕೂಟಿ ಸವಾರನಿಗೆ ಬಸ್ ಗೆ ಟಚ್ ಆಗಿಲ್ಲ, ಏನೊ.. ಆಯ ತಪ್ಪಿ ಬಿದ್ದಿರಬೇಕು ಅಂತ ತನ್ನ ಪಾಡಿಗೆ ಬಸ್ ನಿಲ್ಲಿಸದೆ ಹೊರಟಿದ್ದ ಆದ್ರೆ ಸ್ಥಳಿಯರು ಬಸ್ ನ್ನು ಬೆನ್ನಟ್ಟಿ ಒಂದು ಕಿಲೋ ಮೀಟರ್ ದೂರ ಬಂದ ಮೇಲೆ ಅಡ್ಡಗಟ್ಟಿದ್ರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಬಸ್ ನ್ನು ವಶಕ್ಕೆ ಪಡೆದಿದ್ದಾರೆ.

ಆದ್ರೆ ಬಸ್ ಚಾಲಕ ತನ್ನದೇನು ತಪ್ಪಿಲ್ಲ, ತನ್ನ ಪಾಡಿಗೆ ತಾನು ಹೋಗಿದ್ದೇನೆ ಸ್ಕೂಟಿ ಸವಾರ ತನ್ನ ಬಸ್ ನ ಚಕ್ರಕ್ಕೆ ಸಿಲುಕಿದ್ದು ಸಹ ಗೊತ್ತಿಲ್ಲವೆಂದಿದ್ದಾನೆ. ಒಟ್ಟಾರೆ ಅತ್ತೆಯ ಮನೆಗೆ ಅಂತ ಹೊರಟ ವ್ಯಕ್ತಿಯೊರ್ವನನ್ನು ಬೀಡದ ಜವರಾಯ, ಆಕಸ್ಮಿಕವಾಗಿ ಅಪಘಾತಕ್ಕೆ ಸಿಲುಕಿದ್ದು ವಿಪರ್ವಾಸವೆ ಸರಿ.

LEAVE A REPLY

Please enter your comment!
Please enter your name here